ನಾಯಕ ಹೀಗೆಯೆ ಕಾಣಿಸಿಕೊಳ್ಳಬೇಕೆಂಬ ಸಂಪ್ರದಾಯಕ್ಕೆ ತಮಿಳು ನಟ ವಿಕ್ರಂ ಆಗಾಗ್ಗೆ ಬ್ರೇಕ್ ಹಾಕುತ್ತಲೇ ಇರುತ್ತಾರೆ. ಈ ಹಿಂದಿನ 'ಐ' ಸಿನಿಮಾದಲ್ಲೂ ಇದೇ ಮಾತು ಕೇಳಿಬಂದಿತ್ತು. ಈಗವರು ತಮ್ಮ ಮುಂದಿನ 'ಮರ್ಮ ಮನಿದನ್'ನಲ್ಲಿ ಮಂಗಳಮುಖಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ವಿಕ್ರಮ್ ವಿಲನ್ ಮಂಗಳಮುಖಿ ಅಂತೆ. ಈ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರದ ಬಗೆಗೆ ಕ್ರೇಜ್ ಹೆಚ್ಚಿದೆ. ಆನಂದ್ ಶಂಕರ್ ಎಂಬ ಯುವ ನಿರ್ದೇಶಕ ಈ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದು ಮಲೇಷ್ಯಾದಲ್ಲಿ ಶೂಟಿಂಗ್ ನಡೆಯುತ್ತಿದೆ. ಅಂದಹಾಗೆ, ಈ ಸಿನಿಮಾದಲ್ಲಿ ವಿಕ್ರಮ್ಗೆ ದ್ವಿಪಾತ್ರ. ನಾಯಕಿಯಾಗಿ ನಯನತಾರಾ ಮತ್ತು ನಿತ್ಯಾ ಮೆನನ್ ಕಾಣಿಸಿಕೊಳ್ಳುತ್ತಿದ್ದಾರಂತೆ.