ನಿರ್ದೇಶಕ ರಾಮ್ ಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

ಬಾಲಿವುಡ್ ಗೆ ಮತ್ತೆ ಜಿಗಿದ ಆರ್ ಜಿ ವಿ; ಸಿನೆಮಾ 'ಗೌರ್ನಮೆಂಟ್'

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಅವರಿಗೆ ಈಗ ಮತ್ತೆ ಅದೃಷ್ಟ ಕುದುರಿದೆ.

ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಅವರಿಗೆ ಈಗ ಮತ್ತೆ ಅದೃಷ್ಟ ಕುದುರಿದೆ. ಅವರು ಈಗ ಮತ್ತೆ ಬಾಲಿವುಡ್ ಗೆ ಹಿಂದಿರುಗಲಿದ್ದಾರಂತೆ.

ಮೂಲಗಳ ಪ್ರಕಾರ "ಅವರ 'ಕಂಪನಿ' ಸಿನೆಮಾದ ಎರಡನೇ ಭಾಗ ಎನ್ನಲಾಗಿದ್ದ ಸಿನೆಮಾಗೆ 'ಗೌರ್ನಮೆಂಟ್' ಎಂಬ ಶೀರ್ಷಿಕೆ ಇಡಲಾಗಿದೆ. ಇದು ಭೂಗತ ಲೋಕದ ಕಥೆಯಾಗಿದ್ದು ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಕಥೆಯಂತೆ. ಇದಕ್ಕಾಗಿ ಸೂಕ್ತ ತಾರಾಗಣದ ಆಯ್ಕೆಯಲ್ಲಿದ್ದಾರೆ ನಿರ್ದೇಶಕ" ಎನ್ನಲಾಗಿದೆ.

ಬಾಲಿವುಡ್ ಗೆ ಹಿಂದಿರುಗಿರುವುದಲ್ಲದೆ, ಸುದೀಪ್ ಅವರು ನಾಯಕ ನಟನಾಗಿರುವ ಮುತ್ತಪ್ಪ ರೈ ಅವರ ಬಯೋಪಿಕ್ ಅನ್ನು ಕನ್ನಡ ಮತ್ತು ಹಿಂದಿಯಲ್ಲಿ ನಿರ್ದೇಶಿಸಲು ಕೂಡ ಮುಂದಾಗಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT