ಸಿನಿಮಾ ಸುದ್ದಿ

ಕಾಗೆ ಬಂಗಾರದ ಸವಾಲಿನಲ್ಲಿ ನಿರ್ದೇಶಕ ಸೂರಿ

Sumana Upadhyaya

ಕೆಂಡಸಂಪಿಗೆ ಚಿತ್ರದ ಅದ್ಭುತ ಯಶಸ್ಸಿನ ನಂತರ ನಿರ್ದೇಶಕ ಸೂರಿ ಅವರು ಚಿತ್ರದ ಮುಂದಿನ ಭಾಗವಾದ ಕಾಗೆ ಬಂಗಾರ ಭಾಗ 1 ಮಾಡುತ್ತಿದ್ದು, ಇದರ ಬಗ್ಗೆ ಜನರಲ್ಲಿ ಭಾರೀ ನಿರೀಕ್ಷೆಯಿದೆ. ಬೇರೆ ಬೇರೆ ಹೆಸರನ್ನು ಹೊಂದಿರುವ ಚಿತ್ರದ ಟೈಟಲ್ ನ್ನು ಹೊಂದಾಣಿಕೆ ಮಾಡಿಕೊಂಡು ಚಿತ್ರ ತೆಗೆಯುವುದು ಸೂರಿಯವರಿಗೆ ನಿಜಕ್ಕೂ ಸವಾಲು.

ಮೊದಲನೆಯದಾಗಿ ಚಿತ್ರಕ್ಕೆ ಸೂಕ್ತ ನಟರನ್ನು ಆಯ್ಕೆ ಮಾಡುವುದು ಸವಾಲು. ಕಾಗೆ ಬಂಗಾರ ಚಿತ್ರದ ಬರವಣಿಗೆ ಕೆಲಸ ನಡೆಯುತ್ತಿದೆ. ಕೆಂಡಸಂಪಿಗೆ ಮಾಡುವಾಗ ಕಾಗೆ ಬಂಗಾರದ ಕೆಲವೊಂದು ದೃಶ್ಯಗಳನ್ನು ತೆಗೆದಿದ್ದೆ. ಈ ಚಿತ್ರಕ್ಕೆ ದೃಷ್ಟಿ ದೋಷವಿರುವ ಪಾತ್ರ ಮಾಡುವ ಮೂವರು ಕಲಾವಿದರು ಬೇಕಾಗಿದ್ದಾರೆ. ಆರಂಭದಲ್ಲಿ, ನಿಜ ಜೀವನದಲ್ಲಿ ಕಣ್ಣು ಕಾಣದಿರುವವರನ್ನು ಚಿತ್ರಕ್ಕೆ ಬಳಸಿಕೊಳ್ಳುವುದೆಂದು ಯೋಚಿಸಿದೆ. ಅದಕ್ಕಾಗಿ ಕೆಲವರ ಆಡಿಷನ್ ಕೂಡ ನಡೆಸಿದೆ. ಆದರೆ ನಾನು ನಿರೀಕ್ಷೆ ಮಾಡಿದಂತೆ ಅದು ಬರಲಿಲ್ಲ. ನನ್ನ ಕಡ್ಡಿಪುಡಿ ಸಿನಿಮಾದಲ್ಲಿ ಕಣ್ಣು ಕಾಣದಿರುವ ಕಲಾವಿದರೊಬ್ಬರನ್ನು ಬಳಸಿಕೊಂಡಿದ್ದೆ. ಆ ಪಾತ್ರ ಚೆನ್ನಾಗಿ ಮೂಡಿ ಬಂದಿತ್ತು. ಆದರೆ ಈ ಬಾರಿ ನನಗೆ ಅಂತಹ ಮೂವರು ಕಲಾವಿದರು ಬೇಕಾಗಿದ್ದಾರೆ. ಇಬ್ಬರು 45ರಿಂದ 55 ವರ್ಷದವರು ಮತ್ತು ಇನ್ನೊಬ್ಬರು ಸಣ್ಣ  ವಯಸ್ಸಿನವರು. ಚಿತ್ರ ದೃಷ್ಟಿ ದೋಷವಿರುವವರ ಮೇಲೆಯೇ ಮಾಡುವಂಥದ್ದು ಎಂದು ಸೂರಿ ವಿವರಿಸಿದರು.

ಇನ್ನೊಂದೆಡೆ ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡ್ಗ ಚಿತ್ರದಲ್ಲಿ ಬ್ಯುಸಿಯಾಗಿರುವ ಸೂರಿ ಹಲವು ನಾಟಕ ಶಾಲೆಗಳನ್ನು ಭೇಟಿ ಮಾಡಿ ಅಲ್ಲಿ ದೃಷ್ಟಿಮಾಂದ್ಯವಿರುವ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕಲಾವಿದರ ಹುಡುಕಾಟದಲ್ಲಿ ತೊಡಗಿದ್ದಾರೆ.

ನಮ್ಮ ಪ್ರೊಡಕ್ಷನ್ ಹೌಸ್ ಆದ ಪರಿಮಳ ಫ್ಯಾಕ್ಟರಿಯಲ್ಲಿ ಪ್ರತಿಭಾವಂತ ಕಲಾವಿದರಿಗೆ ಪ್ರಾಶಸ್ತ್ಯ ನೀಡುತ್ತೇವೆ. ಅವರಿಗೆ ಒಳ್ಳೆಯ ವೇದಿಕೆಯನ್ನು ಕೂಡ ನೀಡುತ್ತೇವೆ ಎನ್ನುತ್ತಾರೆ.
ಕೆಂಡಸಂಪಿಗೆಯಲ್ಲಿದ್ದ ಪ್ರಶಾಂತ್ ಸಿದ್ದಿ ಸೇರಿದಂತೆ ಕೆಲವು ಕಲಾವಿದರು ಕಾಗೆ ಬಂಗಾರದಲ್ಲಿ ಇರುತ್ತಾರೆ. ನಿಮ್ಮಲ್ಲಿ ಯಾರಾದರೂ ದೃಷ್ಟಿ ದೋಷವಿರುವ ಪಾತ್ರ ಮಾಡಲಿಚ್ಛಿಸುವವರು, ನಾಟಕದ ಹಿನ್ನೆಲೆಯಿಂದ ಬಂದವರಾಗಿದ್ದು, ಸೂರಿಯವರ ಕಾಗೆ ಬಂಗಾರದಲ್ಲಿ ನಟಿಸಲು ಇಚ್ಛೆಯಿದ್ದರೆ suricinema@gmail.comಗೆ ಮೇಲ್ ಮೂಲಕ ಸಂಪರ್ಕಿಸಬಹುದು.

SCROLL FOR NEXT