ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜಪಾನ್ ನಲ್ಲಿ ಚಿತ್ರೀಕರಣ ನಡೆಸಲು ಕೋಟಿಗೊಬ್ಬ-2 ಚಿತ್ರ ತಂಡ ನಿರ್ಧರಿಸಿದೆ. ಸುದೀಪ್ ಅಭಿನಯದ 'ಕೋಟಿಗೊಬ್ಬ -2' ಚಿತ್ರದ ಶೂಟಿಂಗ್ ಮುಗಿದಿದ್ದು. ಕೇವಲ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಈ ಹಾಡುಗಳ ಚಿತ್ರೀಕರಣವನ್ನು ಜಪಾನಿನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಕೆ ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ತಮಿಳು ಭಾಷೆಯಲ್ಲಿ ತಯಾರಿಸಲಾಗುತ್ತಿದೆ.
ಮಲೇಷ್ಯಾ, ಸಿಂಗಾಪುರ, ಅಮೆರಿಕಾ ಇವೆಲ್ಲಾ ಚಿತ್ರಗಳಲ್ಲಿ ತೋರಿಸೋದು ಬಹಳ ಕಾಮನ್ ಆಗಿದೆ. ಈಗ ಜನ ಹೊಸ ಲೊಕೇಶನ್‌ಗಳನ್ನು ನೋಡೋಕೆ ಇಷ್ಟಪಡ್ತಾರೆ. ಹಾಗೆ ನೋಡಿದರೆ ಜಪಾನ್‌ನಲ್ಲಿ ಶೂಟಿಂಗ್ ಆಗಿರೋ ಚಿತ್ರಗಳು ಬಹಳ ಕಡಿಮೆ.
ಕನ್ನಡದ ಚಿತ್ರಗಳಂತೂ ಜಪಾನ್‌ನಲ್ಲಿ ಶೂಟಿಂಗ್ ಮಾಡೇ ಇಲ್ಲ. ಹಾಗಾಗಿ ಎರಡು ಹಾಡುಗಳನ್ನು ಜಪಾನಿನ ಒಂದಷ್ಟು ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಿಸುವ ಬಗ್ಗೆ ನಿರ್ಮಾಪಕರು ಆಲೋಚನೆ ಮಾಡ್ತಿದ್ದಾರಂತೆ. ಆದರೆ ಇದರ ಕುರಿತು ನಿರ್ಧಾರ ಮಾತ್ರ ನಿರ್ದೇಶಕ ರವಿಕುಮಾರ್ ಅವರದ್ದೇ ಎನ್ನಲಾಗಿದೆ.