ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ ಕನ್ನಡ ಚಿತ್ರ (ಸಂಗ್ರಹ ಚಿತ್ರ)
ಶಿವರಾಜ್ ಕುಮಾರ್ ಅಭಿನಯದ `ಕಿಲ್ಲಿಂಗ್ ವೀರಪ್ಪನ್' ಸಿನಿಮಾ ತೆಲುಗಿನಲ್ಲಿ ಸದ್ದು ಮಾಡುತ್ತಿದೆ. ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್‍ನಲ್ಲೇ ಈ ಸಿನಿಮಾ ಕಲೆಕ್ಷನ್ ಜೋರಾಗಿದೆ.
ಇದರ ಪ್ರಭಾವ ಶಿವಣ್ಣ ಅವರ ಮುಂದಿನ ಸಿನಿಮಾಗಳ ಮೇಲೂ ಆಗಲಿದೆ ಎನ್ನುವ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಈ ನಿಟ್ಟಿನಲ್ಲಿ ಸದ್ಯ ಬಿಡುಗಡೆಯ ಬಾಗಿಲಲ್ಲಿರುವ `ಶಿವಲಿಂಗ' ಚಿತ್ರದ ಡಬ್ಬಿಂಗ್ ರೈಟ್ಸ್‍ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ರೆಗ್ಯುಲರ್ ಆಗಿ ಪರಭಾಷಾ ಚಿತ್ರಗಳನ್ನು ಡಬ್ ಮಾಡಿ ಬಿಡುಗಡೆ ಮಾಡುವ ನಿರ್ಮಾಪಕರು ಈಗಾಗಲೇ `ಶಿವಲಿಂಗ' ಚಿತ್ರದ ಡಬ್ಬಿಂಗ್ ಹಕ್ಕುಗಳ ಖರೀದಿ ಮಾಡಲು ಮುಂದೆ ಬಂದಿದ್ದಾರಂತೆ. ಪಿ.ವಾಸು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣ ಸೇರಿದಂತೆ ಎಲ್ಲ ಕೆಲಸಗಳೂ ಪೂರ್ಣಗೊಂಡಿವೆ.
ಸದ್ಯ ಶಿವಣ್ಣ ಅಭಿನಯದ ಚಿತ್ರಗಳಲ್ಲಿ ಇದೇ ಬಿಡುಗಡೆಗೆ ಸಿದ್ಧವಾಗಿರುವುದು. ಆದರೆ, ಬಿಡುಗಡೆಯ ಮುನ್ನವೇ ಚಿತ್ರದ ಡಬ್ಬಿಂಗ್ ರೈಟ್ಸ್‍ಗೆ ಬೇಡಿಕೆ ಬಂದಿರುವುದು ನಿರ್ಮಾಪಕ ಕೆಎ ಸುರೇಶ್ ಅವರ ಖುಷಿ ಕಾರಣವಾಗಿದೆ. ಹಾಗೆ ನೋಡಿದರೆ `ಈಗ' ಸಿನಿಮಾ ಯಶಸ್ವಿಯಾಗುತ್ತಿದ್ದಂತೆಯೇ ನಟ ಸುದೀಪ್ ಅಭಿನಯದ ನಾಲ್ಕೈದು ಚಿತ್ರಗಳು ತೆಲುಗಿಗೆ ಡಬ್ ಆಗಿದ್ದವು. ಈಗ `ಕಿಲ್ಲಿಂಗ್ ವೀರಪ್ಪನ್' ನಾಯಕನ ಸರದಿ.
ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ ಕನ್ನಡ ಚಿತ್ರ (ಸಂಗ್ರಹ ಚಿತ್ರ)