ಬಾಹುಬಲಿ-2 ಪೂರ್ಣವಾದ ಕೂಡಲೇ ಪ್ರಭಾಸ್ ವಿವಾಹ
ಬಾಹುಬಲಿ 2 ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗೋವರೆಗೆ ಪ್ರಭಾಸ್ಗೆ ಮದುವೆ ಇಲ್ಲ. ಆದರೆ ಬಾಹುಬಲಿ 2 ಮುಗಿಯುತ್ತಿದ್ದಂತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಪ್ರಭಾಸ್ ..
ಬಾಹುಬಲಿ 2 ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗೋವರೆಗೆ ಪ್ರಭಾಸ್ಗೆ ಮದುವೆ ಇಲ್ಲ. ಆದರೆ ಬಾಹುಬಲಿ 2 ಮುಗಿಯುತ್ತಿದ್ದಂತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಹೇಳಿದ್ದಾರೆ.
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕಾಗಿ ಮದುವೆಯನ್ನು ಮುಂದೂಡಿದವರು ಟಾಲಿವುಡ್ ಹೀರೋ ಪ್ರಭಾಸ್. ಬಾಹುಬಲಿ 2 ಚಿತ್ರದ ಶೂಟಿಂಗ್ ಆರಂಭವಾಗಿದೆ. ಮೂಲಗಳ ಪ್ರಕಾರ ಪ್ರಭಾಸ್ ಇದೇ ವರ್ಷ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ.
ಪ್ರಭಾಸ್ ದೊಡ್ಡಪ್ಪ, ಹಿರಿಯ ನಟ ಕೃಷ್ಣಂರಾಜು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ. ಪ್ರಭಾಸ್ ಫ್ಯಾಮಿಲಿ ಈಗಾಗಲೇ ವಧುವಿನ ಹುಡುಕಾಟದಲ್ಲಿದ್ದು, ಈ ವರ್ಷ ಪ್ರಭಾಸ್ ಬ್ಯಾಚಲರ್ ಲೈಫ್ನಿಂದ ಮುಕ್ತಿ ಪಡೆಯುತ್ತಾರೆ ಎಂಬ ಸುಳಿವನ್ನು ಬಿಚ್ಚಿಟ್ಟಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.