ನವದೆಹಲಿ: ಬಹುಭಾಷಾ ನಟ ಕಮಲ ಹಾಸನ್ ಅವರು 67ನೇ ಗಣರಾಜ್ಯೋತ್ಸವ ದಿನದಂದು ಟ್ವಿಟರ್ ನಲ್ಲಿ ತಮ್ಮ ಖಾತೆ ತೆರದಿದ್ದಾರೆ.
ಗಣರಾಜ್ಯೋತ್ಸವ ಶುಭಾಶಯ ಹೇಳುವದರೊಂದಿಗೆ ಟ್ವಿಟ್ಟರ್ ಗೆ ಸೇರಿದ ಮೊದಲ ದಿನವೇ ಕಮಲ ಹಾಸನ್ ಅವರು ವಿಡಿಯೋ ಚಿತ್ರಿಕೆಯೊಂದರ ಮೂಲಕ ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ. ಟ್ವಿಟರ್ ಗೆ ಪಾದಾರ್ಪಣೆ ಮಾಡಲು ಗಣ ರಾಜ್ಯೋತ್ಸವ ದಿನವನ್ನೆ ಆಯ್ಕೆ ಮಾಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಅಪಾರ ಸಂತಸ ತಂದಿದೆ.
ಟ್ವಿಟರ್ ಗೆ ಸೇರಿದ 24 ಗಂಟೆಗಳಲ್ಲೇ ಕಮಲ ಹಾಸನ್ ಅವರ ಹಿಂಬಾಲಕರ ಸಂಖ್ಯೆ 34,000 ದಾಟಿದೆ. ಪರಿಪೂರ್ಣ ದೇಶಪ್ರೇಮವನ್ನು ಬಿಂಬಿಸುವ ರೀತಿಯಲ್ಲಿ ಕಮಲ ಹಾಸನ್ ಜನಗಣಮನ ಹಾಡುವ ವಿಡಿಯೋ ಚಿತ್ರಿಕೆಯು ಟ್ವಿಟ್ಟರ್ ಅಭಿಮಾನಿಗಳಿಗೆ ಅಪಾರ ಸಂತಸ ನೀಡಿದೆ.
ತನ್ನ ತಂದೆ ಟ್ವಿಟ್ಟರ್‌ಗೆ ಸೇರಿರುವುದು ಮಗಳು ಶ್ರುತಿ ಹಾಸನ್‌ಗೆ ತುಂಬಾ ಖುಷಿ ಕೊಟ್ಟಿದೆಯಂತೆ.