'ಭುಜಂಗ'ದಲ್ಲಿ ಪ್ರಜ್ವಲ್ ಮತ್ತು ಮೇಘನಾ ರಾಜ್ 
ಸಿನಿಮಾ ಸುದ್ದಿ

'ಭುಜಂಗ'ದಲ್ಲಿ ಪ್ರಜ್ವಲ್ ಮಾಂತ್ರಿಕತೆ ಮರುಕಳಿಸಿರುವ ಭರವಸೆ

2013 ರಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ನಟ ಪ್ರಜ್ವಲ್ ದೇವರಾಜ್ ಅವರಿಗೆ 2014 ಮತ್ತು 2015 ಅಷ್ಟೇನು ಯಶಸ್ವಿ ವರ್ಷಗಳಲ್ಲ. ಈ ಮುಸುಕಿನಿಂದ ಹೊರ ಬರಲು ಪ್ರಯತ್ನಿಸುತ್ತಿರುವ ನಟ 'ಭುಜಂಗ'

ಬೆಂಗಳೂರು: 2013 ರಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ನಟ ಪ್ರಜ್ವಲ್ ದೇವರಾಜ್ ಅವರಿಗೆ 2014 ಮತ್ತು 2015 ಅಷ್ಟೇನು ಯಶಸ್ವಿ ವರ್ಷಗಳಲ್ಲ. ಈ ಮುಸುಕಿನಿಂದ ಹೊರ ಬರಲು ಪ್ರಯತ್ನಿಸುತ್ತಿರುವ ನಟ 'ಭುಜಂಗ'ದಲ್ಲಿ ತಮ್ಮ ಮಾಂತ್ರಿಕತೆ ಮರುಕಳಿಸಿರುವ ಭರವಸೆಯಲ್ಲಿದ್ದಾರೆ. 
ಶುಕ್ರವಾರ ಬಿಡುಗಡೆಯಾಗಲಿರುವ ಸಿನೆಮಾದಲ್ಲಿ ಪ್ರಜ್ವಲ್ ಮೊದಲ ಬಾರಿಗೆ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ "ನಾನು ಲವರ್ ಬಾಯ್ ಇಮೇಜ್ ನಿಂದ ಹೊರಬಂದು ಒಬ್ಬ ಸಣ್ಣ ಕಳ್ಳನ ಪಾತ್ರದಲ್ಲಿ ನಟಿಸಿದ್ದೇನೆ. 'ಅರ್ಜುನ' ಸಿನೆಮಾದ ನಂತರ ಒಂದೆರಡು ಅವಕಾಶಗಳು ಬಂದಿದ್ದವು ಆದರೆ 'ಭುಜಂಗ'ನ ಪಾತ್ರ ಹೆಚ್ಚು ಆಪ್ತವೆನಿಸಿ ಒಪ್ಪಿಕೊಂಡೆ. ಮತ್ತೊಂದು ಕಾರಣ ಸ್ಕ್ರಿಪ್ಟ್ ಬರಹಗಾರ ಬಿ ಎ ಮಧು" ಎನ್ನುತ್ತಾರೆ ಪ್ರಜ್ವಲ್. 
ನಿರ್ದೇಶಕ ಜೀವ ಈ ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಹಿಂದಿನ ಸಿನೆಮಾಗಳಿಗೆ ಹೋಲಿಸಿದರೆ ಈ ಸಿನೆಮಾದಲ್ಲಿ ನಿರ್ದೇಶಕನ ಜೊತೆಗೆ ಹೆಚ್ಚು ಸಮಯ ಕಳೆದದ್ದನ್ನು ಪ್ರಜ್ವಲ್ ನೆನಪಿಸಿಕೊಳ್ಳುತ್ತಾರೆ "ನಾನು ಕಣ್ಣುಮುಚ್ಚಿ ನಿರ್ದೇಶಕರನ್ನು ಅನುಸರಿಸುತ್ತಿದ್ದೆ ಆದರೆ ಕೆಲವೊಮ್ಮೆ ಅದರಿಂದ ಹಿನ್ನಡೆಯಾಗುತ್ತಿದ್ದು ಉಂಟು. ನನ್ನ 'ಮಧು ಮತ್ತು ಮಾನಸಿ' ಸಿನೆಮಾದ ನಂತರ ಚಿತ್ರೀಕರಣದ ನಂತರ ಸೆಟ್ ಗಳಲ್ಲಿ ಹೆಚ್ಚಿನ ಸಮಯ ಕಳೆಯತೊಡಗಿದೆ. ಅದರ ಫಲ ತೆರೆಯ ಮೇಲೆಯೂ ಕಾಣಿಸುತ್ತಿದೆ" ಎನ್ನುತ್ತಾರೆ. 
'ಭುಜಂಗ'ದಲ್ಲಿ ಮೇಘನಾ ರಾಜ್ ನಾಯಕನಟಿಯಾಗಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT