ನಟಿ ಶ್ರದ್ಧಾ ಶ್ರೀನಾಥ್ ಮತ್ತು ನಿರ್ದೇಶಕ ಮಣಿರತ್ನಂ
ಬೆಂಗಳೂರು: ತಮಿಳು ಚಿತ್ರರಂಗದ ಗಮನ ಸೆಳೆದಿರುವ 'ಯು-ಟರ್ನ್' ಹುಡುಗಿ ಶ್ರದ್ಧಾ ಶ್ರೀನಾಥ್ ಸದ್ಯಕ್ಕೆ ಊಟಿಯಲ್ಲಿ ಮಣಿರತ್ನಂ ಅವರ ಸಿನೆಮಾ ಸೆಟ್ ನಲ್ಲಿದ್ದಾರೆ. ಕಾರ್ತಿ ಮತ್ತು ಅದಿತಿ ರಾವ್ ಹೈದರಿ ನಟಿಸುತ್ತಿರುವ 'ಕಾಟ್ರು ವೇಳೆಯೆದೈ'ನಲ್ಲಿ ಪಾತ್ರ ಗಳಿಸಿದ್ದಾರೆ
ಪ್ರತಿಭೆಗಳನ್ನು ಸದಾ ಗುರುತಿಸುವ ನಿರ್ದೇಶಕ ಮಣಿರತ್ನಂ, ಅಂತರ್ಜಾಲದಲ್ಲಿ ಶ್ರದ್ಧಾ ಅವರ ಪ್ರೊಫೈಲ್ ಕಂಡರಂತೆ. 'ಯು-ಟರ್ನ್' ನಲ್ಲಿ ಒಳ್ಳೆಯ ಅಭಿನಯ ನೀಡಿದ ಪ್ರಚಾರವು ನಟಿಗೆ ಸಹಾಯವಾಗಿದ್ದು ಮಣಿರತ್ನಂ ಅವರಿಂದ ನಟಿಗೆ ಕರೆ ಬಂದಿದೆ.
ನಿರ್ದೇಶಕ ಮಣಿರತ್ನ ವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿರುವ ನಟಿ ತಮ್ಮ ಅನುಭವವನ್ನು ಹಂಚಿಕೊಂಡದ್ದು ಹೀಗೆ "ಮಣಿರತ್ನಂ ಅವರನ್ನು ಕಂಡು ಭಯವಾಯಿತು ಮತ್ತು ಈ ಪ್ರಖ್ಯಾತ ನಿರ್ದೇಶಕ ನನ್ನ ಜೊತೆಗೆ ಮಾತನಾಡುವಾಗಲಾಗಲಿ ಅಥವಾ ನನಗೆ ಸೂಚನೆಗಳನ್ನು ನಿಡುವಾಗಲಾಗಲಿ ಅರ್ಧ ಸಮಯ ನಾನು ಆಶ್ಚರ್ಯದಿಂದಲೇ ಇದ್ದೆ" ಎನ್ನುತ್ತಾರೆ ಶ್ರದ್ಧಾ,
"ಸೆಟ್ ನಲ್ಲಿ ಹಲವು ದಿನಗಳನ್ನು ಕಳೆದ ಮೇಲೆ, ಮಣಿರತ್ನಂ ಶಿಸ್ತಿನ ನಿರ್ದೇಶಕ ಎಂದು ತಿಳಿಯಿತು. ಅದ್ಭುತ ವೃತ್ತಿಪರನಾಗಿ ನನಗೆ ಕಂಡರು" ಎನ್ನುತ್ತಾರೆ ಶ್ರದ್ಧಾ. ಸಿನೆಮಾದಲ್ಲಿ ಸೇನಾ ಹಿನ್ನಲೆಯಿರುವ ಯುವತಿಯಾಗಿ ಹೀರೊ ಕಾರ್ತಿಕ್ ನ ಜೊತೆಗೆ ಪರಿಚಯ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
"ಕಾರ್ತಿ ಜೊತೆಗಿನ ದೃಶ್ಯಗಳನ್ನು ಸದ್ಯಕ್ಕೆ ಚಿತ್ರೀಕರಿಸಲಾಗುತ್ತಿದೆ. ಆರ್ ಜೆ ಬಾಲಾಜಿ ಅವರನ್ನು ಸೆಟ್ ನಲ್ಲಿ ಭೇಟಿ ಮಾಡಿದೆ. ಅದಿತಿ ಅವರನ್ನು ಸೆಟ್ ಗಳಲ್ಲಿ ನೋಡಿದ್ದೇನಾದರೂ ಅವರ ಜೊತೆಗೆ ಇನ್ನು ಮಾತನಾಡಬೇಕಿದೆ. ನಾನು ಭೇಟಿ ಮಾಡಿದ ಮತ್ತೊಬ್ಬ ಪ್ರಮುಖ ವ್ಯಕ್ತಿ ಸಿನೆಮ್ಯಾಟೋಗ್ರಾಫರ್ ರವಿವರ್ಮ. ಅವರು ಅದ್ಭುತ ವ್ಯಕ್ತಿ" ಎನ್ನುತ್ತಾರೆ ಶ್ರದ್ಧಾ.
'ಉಳಿದವರು ಕಂಡಂತೆ' ತಮಿಳು ರಿಮೇಕ್ ನಲ್ಲಿಯೂ ಶ್ರದ್ಧಾ ಬ್ಯುಸಿಯಾಗಿದ್ದು, ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಸಿನೆಮಾದಲ್ಲೂ ತೊಡಗಿಸಿಕೊಂಡಿದ್ದಾರೆ.