ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ 
ಸಿನಿಮಾ ಸುದ್ದಿ

ನಾನೊಬ್ಬ ಕ್ರಿಕೆಟಿಗನಾಗಬೇಕೆಂಬುದು ನನ್ನ ತಂದೆಯ ಆಸೆಯಾಗಿತ್ತು: ಸಲ್ಮಾನ್ ಖಾನ್

ದೇಶಕ್ಕಾಗಿ ನಾನು ಕ್ರಿಕೆಟ್ ಆಡಬೇಕೆಂದು ನನ್ನ ತಂದೆ ಆಸೆ ಪಟ್ಟಿದ್ದರೆಂದು ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ...

ಮುಂಬೈ: ದೇಶಕ್ಕಾಗಿ ನಾನು ಕ್ರಿಕೆಟ್ ಆಡಬೇಕೆಂದು ನನ್ನ ತಂದೆ ಆಸೆ ಪಟ್ಟಿದ್ದರೆಂದು ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.

ಟೆನಿಸ್ ಆಟಗಾರ್ತಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಆತ್ಮಕಥನ 'Ace Against Odds' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ನನ್ನ ತಂದೆ ಸಲೀಂ ಖಾನ್ ಅವರಿಗೆ ನಾನೊಬ್ಬ ಕ್ರಿಕೆಟಿಗನಾಗಬೇಕು. ದೇಶಕ್ಕಾಗಿ ಕ್ರಿಕೆಟ್ ಆಡಬೇಕೆಂಬ ಆಸೆಯಿತ್ತು. ಅದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಸಲೀಮ್ ದುರಾನಿ ಅವರನ್ನು ನನಗೆ ತರಬೇತುದಾರನಾಗಿ ನೇಮಕ ಮಾಡಿದ್ದರು ಎಂದು ಹೇಳಿದ್ದಾರೆ.

ಮೊದಲ ದಿನ ಕ್ರಿಕೆಟ್ ಆಡಿದ್ದನ್ನು ನೋಡಿದ್ದ ಸಲೀಮ್ ದುರಾನಿಯವರು ನೋಡಿದ್ದರು. ತುಂಬಾ ಚೆನ್ನಾಗಿ ಆಟವಾಡಿದ್ದೆ. ಎರಡನೇ ದಿನವೂ ಆಟವನ್ನು ಗಮನಿಸಿದ್ದರು. ನಂತರ ತಂದೆ ಬಳಿ ಮಾತನಾಡಿ ಕ್ರಿಕೆಟ್ ನಲ್ಲಿ ಮುಂದೆ ನನಗೆ ದೊಡ್ಡ ಭವಿಷ್ಯವಿದೆ ಎಂದು ಹೇಳಿದ್ದರು. ಮೂರನೇ ಬಾರಿ ಆಡುವಾಗ ತಂದೆ ಆಟವನ್ನು ನೋಡಲು ಬರುತ್ತಿದ್ದಾರೆಂಬುದು ನನಗೆ ತಿಳಿದಿತ್ತು. ಹೀಗಾಗಿ ಬೇಕಂತಲೇ ಕೆಟ್ಟದಾಗಿ ಆಟವಾಡಿದ್ದೆ.

ಶಾಲೆಗೆ ಹೋಗುತ್ತಿದ್ದ ವೇಳೆ ಕ್ರಿಕೆಟ್ ಅಭ್ಯಾಸಕ್ಕೆ ಬೆಳ್ಳಂಬೆಳ್ಳಗ್ಗೆ ಏಳಬೇಕಿತ್ತು. ಕಠಿಣ ಅಭ್ಯಾಸ ಮಾಡಬೇಕಿತ್ತು. ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಇರಬೇಕಿತ್ತು. ಹೀಗಾಗಿ ಬೆಳಗ್ಗೆ 8.30ರ ಸುಮಾರಿಗೆ ಏಳುತ್ತಿದ್ದೆ. ಕಷ್ಟಪಟ್ಟು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುತ್ತಿದ್ದೆ. ಇದು ನನಗೆ ತುಂಬಾ ಕಷ್ಟ ಎನಿಸತೊಡಗಿತ್ತು. ಹೀಗಾಗಿ ಕ್ರಿಕೆಟ್ ಬಗ್ಗೆ ನನಗೆ ಆಸಕ್ತಿ ಇರಲಿಲ್ಲ. ನಿಜ ಹೇಳಬೇಕೆಂದರೆ ನಾನು ನಿರ್ದೇಶಕನಾಗಬೇಕೆಂಬ ಆಸೆ ನನಗಿತ್ತು ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT