ಜೆಡಿಸ್ ಮುಖಂಡ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್
ಬೆಂಗಳೂರು: ಇದು ರಾಜಕಾರಿಣಿಗಳ ಪುತ್ರರ ಸಿನೆಮಾ ಪ್ರವೇಶದ ಪರ್ವ. ಎಚ್ ಎಂ ರೇವಣ್ಣನವರ ಪುತ್ರ ಅನೂಪ್ ಅವರ 'ಲಕ್ಷ್ಮಣ' ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈಗ ಜೆಡಿಸ್ ಮುಖಂಡರಾದ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಕನ್ನಡ ಚಿತ್ರೋದ್ಯಮದಲ್ಲಿ ಹೆಸರು ಮಾಡುವ ಭರವಸೆ ತೋರುವ ಸಚಿನ್ ತಮಗೆ ಹಿರಿಯ ನಟ ಅಂಬರೀಶ್ ಅವರ ಮಾರ್ಗದರ್ಶನ ಇದೆ ಎನ್ನುತ್ತಾರೆ. "ನನ್ನ ತಂದೆ ಮತ್ತು ಅವರು 25 ವರ್ಷದ ಗೆಳೆಯರು. ನನ್ನ ಬಗ್ಗೆ ಅವರ ಪ್ರೀತಿ ಇಂದಿಗೂ ಇರುತ್ತದೆ. ನಾನು ಸಿನೆಮಾಗೆ ಪ್ರವೇಶಿಸುತ್ತಿರುವುದನ್ನು ತಿಳಿಸಲು ಅವರ ಬಳಿ ಹೋಗಿದ್ದಾಗ, ಅವರು - ಸಚಿನ್ ನೀನು ನನ್ನ ಮಗನಿದ್ದಂತೆ. ನಾನು ನ್ನ ಬೆಂಬಲಕ್ಕಿರುತ್ತೇನೆ ಎಂದಿದ್ದರು" ಎಂದು ತಿಳಿಸುತ್ತಾರೆ.
ಮಹೇಶ್ ಸುಖಧರೆ ನಿರ್ದೇಶನದ 'ಹ್ಯಾಪಿ ಬರ್ತ್ ಡೇ' ಮೂಲಕ ಸಚಿನ್ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
"ಮೊದಲ ದಿನದ ಚಿತ್ರೀಕರಣದಿಂದಲೂ ಅವರು ನನಗೆ ಸಲಹೆಗಳನ್ನು ನೀಡುತ್ತಿದ್ದಾರೆ" ಎನ್ನುವ ಸಚಿನ್ "ಅಂಬರೀಶ್ ನನಗೆ ಗಾಡ್ ಫಾದರ್' ಎನ್ನುತ್ತಾರೆ.
"ಅವರ ಮಾರ್ಗದರ್ಶನ ಮತ್ತು ಅವರ ಜೊತೆಗೆ ನಟಿಸುವ ಅವಕಾಶ ಎರಡೂ ಸಿಕ್ಕಿರುವುದು ನನ್ನ ಅದೃಷ್ಟ. ಅವರಿಗೆ ನಟನನ್ನು ಸ್ಟಾರ್ ಮಾಡುವ ಮಾಂತ್ರಿಕ ಸ್ಪರ್ಶ ಇದೆ ಎಂದು ಕೇಳಿದ್ದೇನೆ" ಎನ್ನುತ್ತಾರೆ ಸಚಿನ್.
ಜುಲೈ 23 ಕ್ಕೆ ಮಂಡ್ಯದಲ್ಲಿ ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ. ಹರಿಕೃಷ್ಣ ನೀಡಿರುವ ಸಂಗೀತ ಅತ್ಯುತ್ತಮವಾಗಿ ಮೂಡಿ ಬಂದಿದೆ ಎನ್ನುತ್ತಾರೆ ಸಚಿನ್.
ಆಡಿಯೋ ಬಿಡುಗಡೆ ಕಾರ್ಯಕರ್ಮದಲ್ಲಿ ಜನಪ್ರಿಯ ನಟರಾದ ದರ್ಶನ್ ಮತ್ತು ಯಶ್ ಕೂಡ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos