'ಸೀಜರ್' ಸಿನೆಮಾದಲ್ಲಿ ಚಿರಂಜೀವಿ ಸರ್ಜಾ 
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ಮುಂದಿನ ಚಿತ್ರ 'ಸೀಜರ್'ಗೆ ಕ್ರೇಸಿಸ್ಟಾರ್

ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ.

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ. 
ಚಿರಂಜೀವಿಯವರ 2014 ನೇ ವರ್ಷದ ಹುಟ್ಟುಹಬ್ಬದ ದಿನ ಚಾಲನೆಯಾಗಿ ನೆನೆಗುದಿಗೆ ಬಿದ್ದಿದ್ದ 'ಸೀಜರ್' ಕೊನೆಗೂ ಮುಂದುವರೆಯುತ್ತಿದೆ. ವಿನಯ್ ಕೃಷ್ಣ ನಿರ್ದೇಶನದ ಈ ಚಿತ್ರ, ಬಡ್ಡಿ ದುಡ್ಡು ಕಟ್ಟಲಾಗದೆ ಗಾಡಿಗಳನ್ನು ವಶಪಡಿಸಿಕೊಳ್ಳುವ ಕಥಾ ಹಂದರ ಹೊಂದಿದೆ. 
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಇಂತಹ ಕಥೆ ಕೇಳಿದ್ದೇನೆ ಎನ್ನುವ ಚಿರಂಜೀವಿ "ನೈಜತೆ ಮತ್ತು ಸೃಜನಶೀಲತೆ ಬೆರೆತಿರುವ ಅತಿ ಹೊಚ್ಚ ಹೊಸ ಕಥೆ ಇದು. ಅಲ್ಲದೆ ಈ ಸಿನೆಮಾ ಸೂಕ್ಷ್ಮವಾಗಿ ಭೂಗತ ಲೋಕವನ್ನು ಬೆಸೆಯುತ್ತದೆ" ಎನ್ನುತ್ತಾರೆ.
ಈ ಸಿನೆಮಾದ ಮತ್ತೊಂದು ವಿಶೇಷ ಎಂದರೆ ಚಿರಂಜೀವಿ ಸರ್ಜಾ ಮೊದಲ ಬಾರಿಗೆ ರವಿಚಂದ್ರನ್ ಜೊತೆಗೆ ಕೆಲಸ ಮಾಡುತ್ತಿರುವುದು. "ನಾನು ಅವರ ಜೊತೆಗೆ ನಟಿಸುತ್ತಿರುವುದಕ್ಕೆ ಸಂತಸಗೊಂಡಿದ್ದೇನೆ. ನನ್ನ ಜೋಡಿ ತಾಜಾತನದಿಂದ ಕೂಡಿರುತ್ತದೆ. ಅವರದ್ದು ಈ ಸಿನೆಮಾದಲ್ಲಿ ಮಾಮೂಲಿ ತಂದೆ ಅಥವಾ ಸಹೋದರನ ಪಾತ್ರವಲ್ಲ. ಹೆಸತನದಿಂದ ಕೂಡಿರುತ್ತದೆ" ಎನ್ನುತ್ತಾರೆ ಸರ್ಜಾ. 
ಪರುಲ್ ಯಾದವ್ ಕೂಡ ಸಿನೆಮಾದ ಭಾಗವಾಗುವ ಸಾಧ್ಯತೆ ಇದೆ ಇದೆ ಎಂದು ತಿಳಿದುಬಂದಿದ್ದು ನಾಯಕಿಯ ಪಾತ್ರಕ್ಕೆ ಹೊಸ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ಪ್ರಕಾಶ್ ರಾಜ್ ಕೂಡ ತಾರಾಗಣದಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!