ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ 
ಸಿನಿಮಾ ಸುದ್ದಿ

ಹಿಂದಿ ಡಬ್ 'ಕಬಾಲಿ' ಸೋತರೂ, ರಿಮೇಕ್ ನಲ್ಲಿ ಬಿಗ್ ಬಿ ನಟಿಸುವ ಸಾಧ್ಯತೆ

ವಿಶ್ವದಾದ್ಯಂತ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕಬಾಲಿ' ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾ ಎಂಬ ವರದಿಗಳ ನಡುವೆ ಹಿಂದಿಯಲ್ಲಿ

ನವದೆಹಲಿ: ವಿಶ್ವದಾದ್ಯಂತ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕಬಾಲಿ' ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾ ಎಂಬ ವರದಿಗಳ ನಡುವೆ ಹಿಂದಿಯಲ್ಲಿ ಡಬ್ ಆದ ಅವತರಿಣಿಕೆ ಅಷ್ಟೇನೂ ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿದೆ. 
ಡಿ ಎನ್ ಇ ದಿನಪತ್ರಿಕೆಯ ವರದಿಯ ಪ್ರಕಾರ ಇದಕ್ಕೆ ಕಾರಣ ಹೇಳುವ ಮೂಲಗಳು "ಡಬ್ ಆಗಿರುವ ಹಿಂದಿ ಅವತರಿಣಿಕೆ ಉತ್ತರಭಾರತದಲ್ಲಿ ಅಷ್ಟು ಯಶಸ್ವಿಯಾಗದೆ ಇರುವುದಕ್ಕೆ ಕಾರಣ, ಆ ಸಿನೆಮಾದ ಸಾಂಸ್ಕೃತಿಕ ಮಹತ್ವ. ಮಲೇಶಿಯಾದ ತಮಿಳು ಸಮುದಾಯದ ನಡುವೆ 'ಕಬಾಲಿ' ಸಿನೆಮಾ ನಡೆಯುವುದು. ಆ ಸಂಸ್ಕೃತಿ, ಸಂಭಾಷಣೆ ಎಲ್ಲವು ತಮಿಳು ಸಮುದಾಯಕ್ಕೆ ಹೊಂದಿಕೊಳ್ಳುವಂತಹವು" ಎಂದಿದ್ದಾರೆ. 
ಮುಂಚಿನ ವರದಿಗಳಂತೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 'ಕಬಾಲಿ' ಸಿನೆಮಾದ ಹಿಂದಿ ಅವತರಿಣಿಕೆಯಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿತ್ತು. 
ರಜನಿಕಾಂತ್ ಬಗ್ಗೆ ಮಾತನಾಡಿದ್ದ 65 ವರ್ಷದ ನಟ "ರಜನಿ ಅಸಾಧಾರಣ ವ್ಯಕ್ತಿ. ಅತಿ ದೊಡ್ಡ, ಅದ್ಭುತ ಮತ್ತು ನಿಜವಾದ ಬಾಸ್. ಅವರು ಎಷ್ಟು ಎತ್ತರದ ವ್ಯಕ್ತಿ ಎಂದು ತಮಿಳುನಾಡಿನ ಹೊರಗಿನ ಜನಕ್ಕೆ ಅಷ್ಟು ತಿಳಿದಿಲ್ಲ. ಅವರ ಎಡೆಗಿರುವ ಜನರ ಪ್ರೀತಿಯನ್ನು ಯಾವುದಕ್ಕೂ ಹೋಲಿಸುವುದು ಕಷ್ಟ. ನಾವು ಗೆಳೆಯರು ಮತ್ತು ಸಹೋದ್ಯೋಗಿಗಳು. ನಾನು ಗುಣವಾಚಕಗಳನು ವಿರೋಧಿಸುತ್ತೇನೆ ಆದರೆ ಅವರಿಗಾಗಿ ಹಿಮ್ಮೆಟ್ಟುತ್ತೇನೆ. ಅವರು ನಿಜವಾಗಿಯೂ ಅಭೂತಪೂರ್ವ" ಎಂದಿದ್ದರು. 
ಈ ಹಿಂದೆ ಬಿಗ್ ಬಿ ಸಿನೆಮಾಗಳಾದ 'ದಿವಾರ್', 'ಡಾನ್', 'ನಮಕ್ ಹಲಾಲ್' ಮುಂತಾದ ಸಿನೆಮಾಗಳು ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿ ತಮಿಳಿಗೆ ರಿಮೇಕ್ ಆಗಿದ್ದವು. ಇದು ಈ ಬಾರಿ ತದ್ವಿರುದ್ಧವಾಗಿ ತಮಿಳು ಸಿನೆಮಾದ ಹಿಂದಿ ರಿಮೇಕ್ ನಲ್ಲಿ ಬಿಗ್ ಬಿ ನಟಿಸಲಿದ್ದಾರೆ ಎಂಬ ಸುದ್ದಿ ಪ್ರಚಲಿತವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT