ಸಿನಿಮಾ ಸುದ್ದಿ

'ಗುಡುಗು' ಮೂಲಕ ಕನ್ನಡ ಚಿತ್ರರಂಗಕ್ಕೆ ಶುಭರಕ್ಷ ಪಾದಾರ್ಪಣೆ

Guruprasad Narayana
ಬೆಂಗಳೂರು: 'ಮಾಡೆಲಿಂಗ್' ಕ್ಷೇತ್ರ ಚಿತ್ರರಂಗಕ್ಕೆ ಬರುವುದಕ್ಕೆ ಮೆಟ್ಟಿಲಾದರೆ ಶುಭರಕ್ಷ ಗೌಡ ಸರಿಯಾದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಬಹುದು. ತಮ್ಮ ಮೊದಲ ಭಾಗದ ವೃತ್ತಿಜೀವನದ ಅಡೆತಡೆಗಳನ್ನು ಮೀರಿ ಈಗ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿಯುತ್ತಿರುವ ಈ ಯುವನಟಿ 'ಗುಡುಗು' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ. 
ಸರ್ವಣ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಶುಭರಕ್ಷ ಎದುರು 'ಬೆಂಕಿಪಟ್ಣ' ಖ್ಯಾತಿಯ ಪ್ರತಾಪ್ ನಾರಾಯಣ್ ನಟಿಸಲಿದ್ದಾರೆ. ಈಗಿನ ಸವಾಲುಗಳು ತಾವು ತಮ್ಮ ವೃತ್ತಿಜೀವನದ ಮೊದಲಭಾಗದಲ್ಲಿ ಎದುರಿಸಿದ ಸವಾಲಿನಷ್ಟು ಕಷ್ಟವಲ್ಲ ಎನ್ನುವ ಶುಭರಕ್ಷ "ಎರಡು ಸಿನೆಮಾಗಳು ಮಧ್ಯದಲ್ಲೇ ನಿಂತುಹೋದವು. 'ಗುಡುಗು' ಚೆನ್ನಾಗಿ ಮೂಡಿ ಬಂದಿರುವುದಕ್ಕೆ ಖುಷಿಯಿದೆ. ಮಾತುಕತೆಯ ಭಾಗದ ಚಿತ್ರೀಕರಣ ನುಗಿದಿದ್ದು, ಹಾಡುಗಳ ಚಿತ್ರೀಕರಣ ಆಗಸ್ಟ್ ನಲ್ಲಿ ಪ್ರಾರಂಭವಾಗಲಿದೆ. ನಾನು ಮತ್ತೊಂದು ಸಿನೆಮಾಗೆ ಸಹಿ ಹಾಕಿದ್ದೇನೆ. ಇನ್ನು ಹೆಸರಿಡಬೇಕಾದ ಈ ಸಿನೆಮಾ ಆಗಸ್ಟ್ 28 ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ" ಎನ್ನುತ್ತಾರೆ. 
ಹಾಗೆಯೇ ತೆಲುಗು ಮತ್ತು ತಮಿಳು ಚಿತ್ರರಂಗದತ್ತಲೂ ಶುಭರಕ್ಷ ಮುಖ ಮಾಡಿದ್ದಾರೆ. ಟಾಲಿವುಡ್ ನ ಸಿನೆಮಾವೊಂದರ ಚಿತ್ರೀಕರಣವನ್ನು ಮುಗಿಸಿದ್ದು, ಕಾಲಿವುಡ್ ನಲ್ಲಿ ನಿಖಿಲ್ ಮುರುಗನ್ ಅವರ ಯೋಜನೆಯೊಂದರಲ್ಲಿ ಕೂಡ ನಟಿಸಲಿದ್ದಾರಂತೆ. 
ಚಿತ್ರೋದ್ಯಮಕ್ಕೆ ಜಿಗಿಯುವುದಕ್ಕೂ ಮುಂಚಿತವಾಗಿ ಕಿರುತೆರೆಯ ಧಾರಾವಾಹಿಗಳಾದ 'ಮೊಗ್ಗಿನ ಮನಸ್ಸು' ಮತ್ತು 'ಭಲೇ ಅಪರೂಪ ನಮ್ ಜೋಡಿ'ಯಲ್ಲಿ ನಟಿಸಿದ್ದ ಶುಭರಕ್ಷ ಮತ್ತೆ ಕಿರುತೆರೆಗೆ ಹಿಂದಿರುಗುವ ಆಸಕ್ತಿ ಇಲ್ಲ ಎನ್ನುತ್ತಾರೆ. ಸದ್ಯಕ್ಕೆ ಮಾಡೆಲಿಂಗ್ ಕ್ಷೇತ್ರದಲ್ಲೂ ನಿರತರಾಗಿರುವುದಾಗಿ ತಿಳಿಸುತ್ತಾರೆ. 
SCROLL FOR NEXT