ನಟ ಯಶ್ 
ಸಿನಿಮಾ ಸುದ್ದಿ

ಅಭಿಮಾನಿಗಳ ಬೇಡಿಕೆ ತಣಿಸಲು ಈ ವರ್ಷ 2 ಸಿನೆಮಾಗಳ ಬಿಡುಗಡೆ: ಯಶ್

'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಯಶ್ ಸಿನೆಮಾ ಬಗ್ಗೆ ಹೆಚ್ಚು ತುಟಿಬಿಚ್ಚವುದಿಲ್ಲ. "ಈ ತಿಂಗಳ ಕೊನೆಗೆ ಮಾತುಕತೆಯ ಭಾಗದ ಚಿತ್ರೀಕರಣ ಸಂಪೂರ್ಣಗೊಳ್ಳುತ್ತದೆ

ಬೆಂಗಳೂರು: 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಯಶ್ ಸಿನೆಮಾ ಬಗ್ಗೆ ಹೆಚ್ಚು ತುಟಿಬಿಚ್ಚವುದಿಲ್ಲ. "ಈ ತಿಂಗಳ ಕೊನೆಗೆ ಮಾತುಕತೆಯ ಭಾಗದ ಚಿತ್ರೀಕರಣ ಸಂಪೂರ್ಣಗೊಳ್ಳುತ್ತದೆ. ಆಗಸ್ಟ್ ನಿಂದ ಹಾಡುಗಳ ಚಿತ್ರೀಕರಣ ಮತ್ತು ಅಕ್ಟೊಬರ್ ನಲ್ಲಿ ಬಿಡುಗಡೆಗೆ ಯೋಜಿಸಿದ್ದೇವೆ" ಎಂದಷ್ಟೇ ಹೇಳುತ್ತಾರೆ.
ಸಿನೆಮಾದ ಬಗ್ಗೆ ಇನ್ನು ಹೆಚ್ಚು ಮಾಹಿತಿ ಬಿಚ್ಚುಡುವಂತೆ ಒತ್ತಾಯಿಸಿದರೆ "ಇದು ಬಹಳ ಸರಳ ಸಿನೆಮಾ ಮತ್ತು ಅದರಲ್ಲಿ ಎಲ್ಲಾ ಕಮರ್ಷಿಯಲ್ ಅಂಶಗಳಿವೆ ಮತ್ತು ರೋಮ್ಯಾನ್ಸ್ ಇದೆ. ನಾನು 'ಸಂತು' ಪಾತ್ರದ ಒಳಹೊಕ್ಕಿದಾಗ ಸ್ಟ್ರೈಟ್ ಫಾರ್ವರ್ಡ್ (ನೇರ) ಆಗಿ ಇರುವುದರ ಉಪಕಾರಗಳು ಮತ್ತು ಅಪಾಯಗಳನ್ನು ಮನಗಾಣುತ್ತಾ ಹೋದೆ" ಎನ್ನುತ್ತಾರೆ. 
ಮಹೇಶ್ ರಾವ್ ನಿರ್ದೇಶನದ ಈ ಚಿತ್ರವನ್ನು ಕೆ ಮಂಜು ನಿರ್ದೇಶಿಸುತ್ತಿದ್ದು ರಾಧಿಕಾ ಪಂಡಿತ್ ನಾಯಕ ನಟಿ. ಶ್ಯಾಮ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. 
ಹೊಂಬಾಳೆ ಫಿಲಂಸ್ ನಿರ್ಮಾಣದ 'ಕೆಜಿಎಫ್' ಈ ತಿಂಗಳ ಕೊನೆಯಿಂದ ಚಿತ್ರೀಕರಣ ಪ್ರಾರಂಭಿಸಲಿದ್ದು, ಯಶ್ ಚಿತ್ರತಂಡವನ್ನು ಅಕ್ಟೊಬರ್ ಗೆ ಸೇರಿಕೊಳ್ಳಲಿದ್ದಾರೆ. 
"ಪ್ರಶಾಂತ್ ನೀಲ್ ಜೊತೆಗಿನ ನನ್ನ ಮುಂದಿನ ಸಿನೆಮಾ ಅತಿ ದೊಡ್ಡ ಯೋಜನೆ. ಇದಕ್ಕಾಗಿ ನಾನು ನಾಲ್ಕು ತಿಂಗಳು ಶ್ರಮವಹಿಸಬೇಕು. ಸೆಟ್ ನಲ್ಲಿ ಭಾಗವಹಿಸುವುದಕ್ಕೆ ಮುನ್ನೋಡುತ್ತಿದ್ದೇನೆ" ಎನ್ನುತ್ತಾರೆ. 
ಈ ವರ್ಷ ಎರಡು ಸಿನೆಮಾಗಳ ಬಿಡುಗಡೆಯನ್ನು ನಿರೀಕ್ಷಿಸುತ್ತಿರುವ ಯಶ್ "ನನ್ನ ಯೋಜನೆಗಳ ನಡುವೆ ಅತಿ ದೊಡ್ಡ ಅಂತವಿದೆ ಎಂಬುದು ನನ್ನ ಅಭಿಮಾನಿಗಳ ಗ್ರಹಿಕೆ. ಅವರು ನಾನು 3 ಸಿನೆಮಾ ಮಾಡಬೇಕು ಎಂದು ನಿರೀಕ್ಷಿಸಿದರು ಈ ವರ್ಷ ಎರಡು ಸಿನೆಮಾಗಳನ್ನು ಬಿಡುಗಡೆ ಮಾಡಿ ಅವರ ಬೇಡಿಕೆ ತಣಿಸುವ ತವಕ. " ಎನ್ನುತ್ತಾರೆ ಯಶ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!