ಸೌಮ್ಯ ಸಿಂಗ್ - ಚಿತ್ರ: ನಾಗೇಶ್ ಪೊಳಲಿ
ಬೆಂಗಳೂರು: ವಾರದ ಅವಧಿಯಲ್ಲಿ 23 ವರ್ಷದ ಸೌಮ್ಯ ಸಿಂಗ್ ಯಂತ್ರಗಳನ್ನು ರೂಪಿಸಲು ಶ್ರಮ ವಹಿಸಿದರೆ ವಾರಾಂತ್ಯದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನಿಸುತ್ತಾರೆ. ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್, ಪ್ರವೃತ್ತಿಯಲ್ಲಿ ಮಾಡೆಲ್ ಈಗ ಮಿಸ್ ಇಂಡಿಯಾ ಅಂತಿಮ ಸ್ಪರ್ಧೆಯಲ್ಲಿದ್ದಾರೆ. ಅವರ ಈ ತೀವ್ರ ಆಸಕ್ತಿ ಮಿಸ್ ಅರ್ಥ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ದೆಹಲಿಗೆ ಕೊಂಡೊಯ್ಯುವ ಸಾಧ್ಯತೆ ಇದ್ದು, ಅಲ್ಲಿ ಗೆದ್ದರೆ ಅಕ್ಟೋಬರ್ ಕೊನೆಯಲ್ಲಿ ನಡೆಯಲಿರುವ ಮಿಸ್ ಅರ್ಥ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಳ್ಳಲಿದ್ದಾರೆ.
ಉತ್ತರ ಪ್ರದೇಶ ಮೂಲದ ಸೌಮ್ಯ ತಮ್ಮ ವೃತ್ತಿಜೀವನ ಹರಸಿ ಬೆಂಗಳೂರಿಗೆ ಬಂದವರು. ಬಿ ಟಿ ಎಂ ಲೇಔಟ್ ನಲ್ಲಿ ನೆಲೆಸಿರುವ ಅವರು ಕೆಲಸಕ್ಕಾಗಿ ಜಿಗಣಿಗೆ ಓಡಾಡುತ್ತಾರೆ ಮತ್ತು ವಾರಾಂತ್ಯದಲ್ಲಿ ನಡಿಗೆ, ಮಾತು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಇವರು ದೆಹಲಿಯಲ್ಲಿ ಸಮಯ ಕಳೆಯಿತ್ತಾರೆ. ಮಿಸ್ ಅರ್ಥ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿರುವ 20 ಅಭ್ಯರ್ಥಿಗಳಲ್ಲಿ ಇವರು ಒಬ್ಬರು.
ಸೌಂದರ್ಯ ಸ್ಪರ್ಧೆ ಕೇವಲ ನಾವು ಸುಂದರವಾಗಿ ಕಾಣಿಸಿಕೊಳ್ಳುವುದಷ್ಟೇ ಅಲ್ಲ ಎನ್ನುವ ಅವರು "ನಾವು ಸುಂದರವಾಗಿರುವುದು ಮತ್ತು ಇತರರಲ್ಲಿ ಸುಂದರ ನಗೆ ಮೂಡಿಸುವುದು ಎರಡು ವಿಭಿನ್ನ. ಸೌಂದರ್ಯ ಸ್ಪರ್ಧಿಯಾಗಿ ಇವೆರಡನ್ನೂ ಅನುಭವಿಸುವ ಅದೃಷ್ಟ ನನ್ನದು" ಎನ್ನುತ್ತಾರೆ ಸೌಮ್ಯ.
ಕಿರಣ್ ಬೇಡಿ ಮುನ್ನಡೆಸುವ ಗುರಗಾಂವ್ ನ ನವಾಜ್ಯೋತಿ ಫೌಂಡೇಶನ್ ನಲ್ಲಿಯೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಸೌಮ್ಯ. "ನಾವು ತೊಡಗಿಸಿಕೊಳ್ಳುವ ಚಟುವಟಿಕೆಗಳು ಕೂಡ ಸೌಂದರ್ಯ ಸ್ಪರ್ಧೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮಿಸ್ ಅರ್ಥ್ ಸ್ಪರ್ಧೆಯ ಮುಖ್ಯ ಆಯಾಮ ಅದೇ. ಸೌಂದರ್ಯ ಮತ್ತು ಸಾಮಾಜಿಕ ಹೊಣೆ" ಎಂದು ಅವರು ವಿವರಿಸುತ್ತಾರೆ.
ತಮ್ಮ ಚಟುವಟಿಕೆಗಳಿಗೆ ತಮ್ಮ ಪೋಷಕರ ಪೂರ್ಣ ಸಹಕಾರವಿದೆ ಎಂದು ನೆನಪಿಸಿಕೊಳ್ಳುತ್ತಾರೆ ಸೌಮ್ಯ.
ಬಾಲಿವುಡ್ ನಲ್ಲಿಯೂ ನಟನೆಯ ಆಸಕ್ತಿ ಇರುವುದಾಗಿ ಹೇಳುವ ಸೌಮ್ಯ, ಕೊನೆಯ ಬಾರಿಗೆ ಭಾರತೀಯರೊಬ್ಬರು ಮಿಸ್ ಅರ್ಥ್ ಸ್ಪರ್ಧೆ ಗೆದ್ದದ್ದು 2010 ರಲ್ಲಿ ನಿಕೋಲ್ ಫರಿಯ ಅವರು ಎಂದು ಕೂಡ ನೆನಪಿಸಿಕೊಳ್ಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos