ನಟಿ ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ಸುದೀಪ್ ನಿಂದ ಸ್ಫೂರ್ತಿ; ಕೆ ಪಿ ಎಲ್ ಕ್ರಿಕೆಟ್ ತಂಡ ಕೊಂಡ ರಾಗಿಣಿ

ಕ್ರಿಕೆಟ್ ಮತ್ತು ಸಿನೆಮಾ ಮನರಂಜನೆ ನೀಡುವುದರಲ್ಲಿ ಎಂದಿಗೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಈಗ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಸುದೀಪ್ ಅವರ ನಡೆಯನ್ನು ಅನುಸರಿಸಿ ನಟಿ ರಾಗಿಣಿ ದ್ವಿವೇದಿ

ಬೆಂಗಳೂರು: ಕ್ರಿಕೆಟ್ ಮತ್ತು ಸಿನೆಮಾ ಮನರಂಜನೆ ನೀಡುವುದರಲ್ಲಿ ಎಂದಿಗೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಈಗ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಸುದೀಪ್ ಅವರ ನಡೆಯನ್ನು ಅನುಸರಿಸಿ ನಟಿ ರಾಗಿಣಿ ದ್ವಿವೇದಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಬಳ್ಳಾರಿ ಟಸ್ಕರ್ಸ್ ತಂಡವನ್ನು ಕೊಂಡಿದ್ದಾರೆ. ಸುದೀಪ್ ಸದ್ಯಕ್ಕೆ ಶಿವಮೊಗ್ಗ ತಂಡದ ಒಡೆಯ. 
ನಟಿಸುವುದರ ಜೊತೆಗೆ ಮತ್ತೇನನ್ನಾದರೂ ಮಾಡುವ ಉತ್ಸಾಹದಲ್ಲಿದ್ದ ನಟಿ ಈಗ ಅರವಿಂದ್ ಶೆಟ್ಟಿ ಅವರ ಸಹ ಒಡೆತನದಲ್ಲಿ ತಂಡವನ್ನು ಕೊಂಡಿದ್ದಾರೆ. ಹಾಗೆಯೇ ಈ ಸರಣಿಯಿಂದ ಒದಗುವ ಧನಲಾಭವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದ್ದಾರಂತೆ. 
ರಾಗಿಣಿ ಅವರು ಬಳ್ಳಾರಿ ಟಸ್ಕರ್ ತಂಡವನ್ನು ಕೊಂಡದ್ದು ಏಕೆಂದರೆ, ತಂಡದಲ್ಲಿರುವ ಬಹುತೇಕರು ಅವರ ಗೆಳೆಯರಂತೆ. ಹಾಗೆಯೇ ಈ ತಂಡ ಪ್ರಾದೇಶಿಕ ಪ್ರತಿಭೆಗಳನ್ನು ಗುರುತಿಸಿರುವುದೂ ಕಾರಣವಂತೆ. 
ಈ ನಟಿಗೆ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ವಿಶೇಷ ಪ್ರೀತಿ. ಕ್ರಿಕೆಟ್ ನಲ್ಲಿ ಅವರ ಸದ್ಯದ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಆದರೆ ಎಲ್ಲ ಸಮಯದ ಅವರ ನೆಚ್ಚಿನ ನಟ ರಾಹುಲ್ ದ್ರಾವಿಡ್. ದ್ರಾವಿಡ್ ಆಡಿರುವ ಎಲ್ಲಾ ಪಂದ್ಯಗಳನ್ನು ಅವರು ವೀಕ್ಷಿಸಿದ್ದಾರಂತೆ. 
ಈ ವರ್ಷದ ಕೆ ಪಿ ಎಲ್ ಸರಣಿ ಸೆಪ್ಟೆಂಬರ್ 2016 ಕ್ಕೆ ಪ್ರಾರಂಭವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!