ಕೊಯಮತ್ತೂರು: ತಮಿಳು ಚಿತ್ರನಟ, ನಿರ್ದೇಶಕ ಬಾಲು ಆನಂದ್ (62) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದ ಹಾಗೂ ಕೆಲವು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ಆನಂದ್ ಅವರಿಗೆ ಕಲಾಮಪಾಳ್ಯಂನ ತಮ್ಮ ನಿವಾಸದಲ್ಲಿ ಇದ್ದಾಗ ಎದೆ ನೋವು ಕಾಣಿಸಿಕೊಂಡಿತು. ತತ್ಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ಒಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರು ಎಳೆದರು ಎಂದು ಮೂಲಗಳು ಹೇಳಿವೆ.
ಸತ್ಯರಾಜ್ ಜೊತೆಗೆ ಆನಂದ್ ಅವರು ನಟಿಸಿದ್ದ ‘ಅಣ್ಣಾನಗರ ಪಸ್ಟ್ ಸ್ಟ್ರೀಟ್’ ಹಾಗೂ ವಿಜಯಕಾಂತ್ ಜೊತೆಗೆ ನಟಿಸಿದ್ದ ‘ನಾನೇ ರಾಜ, ನಾನೇ ಮಂತ್ರಿ’ ಚಿತ್ರಗಳು ಅತ್ಯಂತ ಜನಪ್ರಿಯವಾಗಿದ್ದವು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ