ನವದೆಹಲಿ: ಬಿಗ್ ಬಾಸ್ ಸೀಸನ್ 10 ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಯಾಕಂದ್ರೆ ಈ ಬಾರಿ ಬಿಗ್ ಬಾಸ್-10ರ ಸ್ಪರ್ಧೆಗೆ ಭಾಗಿಯಾಗಲು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಅದರಲ್ಲೂ ಇಂಟರ್‌ಸ್ಟಿಂಗ್ ವಿಷ್ಯ ಅಂದ್ರೆ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿ ಸುದ್ದಿ ಮಾಡಿದ್ದ ಪಾಕಿಸ್ತಾನದ ಮಾಡೆಲ್ ಕಂದಿಲ್ ಬಲೊಚ್ ಈ ಬಾರಿಯ ಬಿಗ್ ಬಾಸ್-10ರ ಸ್ಪರ್ಧೆಯಾಗಿ ಭಾಗಿವಹಿಸಲಿದ್ದಾಳಂತೆ..!
ಭಾರತ-ಪಾಕಿಸ್ತಾನ ಟಿ-20 ವಿಶ್ವ ಕಪ್ ವೇಳೆ ಪಾಕಿಸ್ತಾನ ಸೋತಾಗ ಕಣ್ಣೀರು ಹಾಕಿರುವ ವಿಡಿಯೋ ಅಪಲೋಡ್ ಮಾಡಿ ಸುದ್ದಿ ಮಾಡಿದ್ದ ಕಂದಿಲ್ ಬಲೋಚೋ, ಈ ಬಾರಿ ಬಿಗ್ ಬಾಸ್-10 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲಿದ್ದಾಳೆ ಎಂದು ಹೇಳಲಾಗ್ತಿದೆ.
ಈ ಹಿಂದೆ ಕೂಡ ಕಂದಿಲ್ ವಿರಾಟ ಕೊಹ್ಲಿ ನಾನು ನಿನಗಾಗಿ ಹುಚ್ಚಳಾಗಿದ್ದೇನೆ, ನೀನು ಅನುಷ್ಕಾ ಶರ್ಮಳನ್ನು ಬಿಟ್ಟು ಬಿಡು, ನನ್ನ ಹತ್ತಿರ ಬಾ ಎಂದು ಪಾಕ್‌ನ ಮಾಡೆಲ್ ಕಂದಿಲ್ ಬಲೋಚ್ ಹೇಳಿದ್ದಳು. ವಿರಾಟ್ ಕೋಹ್ಲಿ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಳು. ಈ ಹಿಂದೆ ಟಿ-20 ವಿಶ್ವಕಪ್ ಪಾಕ್ ಸೋಲಿನ ಬಳಿಕ ಭಾರತವನ್ನು ಸೋಲಿಸಿದರೆ ಪಾಕಿಸ್ತಾನ ಆಟಗಾರರಿಗಾಗಿ ಬೆತ್ತಲಾಗುತ್ತೇನೆಂದು ಹೇಳಿದ್ದ ನಟಿ ಕಂದಿಲ್ ಸೋತಾಗ ಅಸಮಾಧಾನ ವ್ಯಕ್ಯಪಡಿಸಿದ್ದಳು.