ನಟ-ನಿರೂಪಕ ಸೃಜನ್ ಲೋಕೇಶ್ 
ಸಿನಿಮಾ ಸುದ್ದಿ

ನನ್ನ ಹಾಸ್ಯವನ್ನು ನಾನೇ ಆಹ್ವಾದಿಸುತ್ತೇನೆ: ಸೃಜನ್ ಲೋಕೇಶ್

ತಮ್ಮ ಟಿವಿ ರಿಯಾಲಿಟಿ ಕಾರ್ಯಕ್ರಮ 'ಮಜಾ ಟಾಕೀಸ್' ಮೂಲಕ ಮನೆಮಾತಾಗಿರುವ ನಟ-ನಿರೂಪಕ ಸೃಜನ್, 'ಜಗ್ಗು ದಾದಾ' ಸಿನೆಮಾದಲ್ಲಿ ಹಾಸ್ಯನಟರಾಗಿ ನಗಿಸಲು ಬರಲಿದ್ದಾರೆ.

ಬೆಂಗಳೂರು: ತಮ್ಮ ಟಿವಿ ರಿಯಾಲಿಟಿ ಕಾರ್ಯಕ್ರಮ 'ಮಜಾ ಟಾಕೀಸ್' ಮೂಲಕ ಮನೆಮಾತಾಗಿರುವ ನಟ-ನಿರೂಪಕ ಸೃಜನ್ ಲೋಕೇಶ್, 'ಜಗ್ಗು ದಾದಾ' ಸಿನೆಮಾದಲ್ಲಿ ಹಾಸ್ಯನಟರಾಗಿ ನಗಿಸಲು ಬರಲಿದ್ದಾರೆ. 'ಯು/ಎ' ಪ್ರಮಾಣ ಪತ್ರ ಪಡೆದಿರುವ ಈ ಸಿನೆಮಾ ಮುಂದಿನ ವಾರ ಬಿಡುಗಡೆಯಾಗಲಿದೆ.

ಈ ಸಿನೆಮಾ ತಮಗೆ ಬಹಳ ವಿಶೇಷ ಎಂದು ವಿವರಿಸುವ ಸೃಜನ್ ಅದಕ್ಕೆ ಕಾರಣ ತಮ್ಮ ಆಪ್ತ ಗೆಳೆಯ ನಟ ದರ್ಶನ್ ಅವರೊಂದಿಗೆ ನಟಿಸಿರುವುದು ಎಂದು ತಿಳಿಸುತ್ತಾರೆ.

"ಈ ಸಿನೆಮಾದಲ್ಲಿ ದರ್ಶನ್ ಅವರ ಹಲವು ಛಾಯೆಗಳು ಕಾಣಿಸುತ್ತವೆ ಮತ್ತು ಎಲ್ಲರೂ ಇದನ್ನು ಚೆನ್ನಾಗಿ ಆಸ್ವಾದಿಸಬಲ್ಲರು. ಅಲ್ಲದೆ ನನ್ನ ಪಾತ್ರ ಮಂಜು ಹೀರೋ ಟ್ರ್ಯಾಕ್ ಜೊತೆಜೊತೆಗೇ ನಡೆಯುತ್ತದೆ. ನಾವು ಪ್ರೇಕ್ಷಕರನ್ನು ರಂಜಿಸಲು ತಂಡವಾಗಿ ಬರುತ್ತಿದ್ದೇವೆ" ಎಂದು ವಿವರಿಸುತ್ತಾರೆ ಸೃಜನ್.

"ಮುನ್ನಭಾಯಿ ಸಿನೆಮಾದಲ್ಲಿ ಸಂಜಯ್ ದತ್ ಅವರಿಗೆ ಆರ್ಶದ್ ವಾರ್ಸಿ ಹೇಗೊ, ಜಗ್ಗು ದಾದಾದಲ್ಲಿ ದರ್ಶನ್ ಅವರಿಗೆ ಸೃಜನ್. ಇದನ್ನು ಹೇಳಿದ ಮೇಲೆ ಸ್ಪಷ್ಟಿಕರಿಸುವುದೇನೆಂದರೆ ನಾವಿಲ್ಲಿ ಮುನ್ನಭಾಯಿ ಸರಣಿ ಮಾಡಿಲ್ಲ. ಇದು ವಿಭಿನ್ನ ವಿಷಯ ಮತ್ತು ಸಿನೆಮಾ ಓದುವುದೇ ಹಾಸ್ಯದ ಮೇಲೆ. ಒಂದು ವಿಶೇಷ ಎಂದರ ನನ್ನ ಮತ್ತು ದರ್ಶನ್ ನಡುವಿನ ಕೆಮಿಸ್ಟ್ರಿ" ಎನ್ನುವ ಸೃಜನ್ ನಿರ್ದೇಶಕ ರಾಘವೇಂದ್ರ ಹೆಗಡೆ ಅವ್ರ ಕೆಲಸವನ್ನು ಮನಸಾರೆ ಪ್ರಶಂಸಿಸುತ್ತಾರೆ.

ತಾವೇ ನಡೆಸಿಕೊಡುವ ಜನಪ್ರಿಯ ಟಿವಿ ಕಾರ್ಯಕ್ರಮ 'ಮಜಾ ಟಾಕೀಸ್' ಬಗ್ಗೆಯೂ ಮಾತನಾಡುವ ಅವರು "ಮಜಾ ಟಾಕೀಸ್ ನ ಕೆಲವು ಭಾಗಗಳನ್ನು ನಾನೇ ನೋಡಿಡಾಗ, ನನಗೇ ಆಶ್ಚರ್ಯವಾಗುತ್ತದೆ ಮತ್ತು ನನ್ನ ಸಂಭಾಷಣೆಯನ್ನು ನಾನೇ ಆಸ್ವಾದಿಸುತ್ತೇನೆ" ಎನ್ನುತ್ತಾರೆ ಸೃಜನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT