'ಕೋಟಿಗೊಬ್ಬ-೨' ಸಿನೆಮಾದಲ್ಲಿ ಸುದೀಪ್ ಮತ್ತು ನಿತ್ಯಾ ಮೆನನ್ 
ಸಿನಿಮಾ ಸುದ್ದಿ

'ಕೋಟಿಗೊಬ್ಬ-2' ಸಿನೆಮಾ ಹಾಡಿಗೆ ಸುದೀಪ್, ನಿತ್ಯಾ ಮೆನನ್ ಕಂಠ

ದಕ್ಷಿಣ ಭಾರತದ ಇಬ್ಬರು ಖ್ಯಾತ ನಟರು ಒಟ್ಟಿಗೆ ಬಂದಾಗ ಬರೀ ನಟನೆಗಿಂತಲೂ ಹೆಚ್ಚಿನದ್ದು ಸಿನೆಮಾಗೆ ಒದಗುತ್ತದೆ. ಮೊದಲ ಬಾರಿಗೆ ದ್ವಿಭಾಷಾ ಚಲನಚಿತ್ರ 'ಕೋಟಿಗೊಬ್ಬ-೨' ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವ

ಬೆಂಗಳೂರು: ದಕ್ಷಿಣ ಭಾರತದ ಇಬ್ಬರು ಖ್ಯಾತ ನಟರು ಒಟ್ಟಿಗೆ ಬಂದಾಗ ಬರೀ ನಟನೆಗಿಂತಲೂ ಹೆಚ್ಚಿನದ್ದು ಸಿನೆಮಾಗೆ ಒದಗುತ್ತದೆ. ಮೊದಲ ಬಾರಿಗೆ ದ್ವಿಭಾಷಾ ಚಲನಚಿತ್ರ 'ಕೋಟಿಗೊಬ್ಬ-೨' ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ನಿತ್ಯಾ ಮೆನನ್ ಮತ್ತು ಸುದೀಪ್ ಜೋಡಿ ಸಿನೆಮಾದ ರೊಮ್ಯಾಂಟಿಕ್ ಹಾಡೊಂದನ್ನು ಹಾಡಲಿದ್ದಾರೆ ಕೂಡ. ಈ ಸಿನೆಮಾ ತಮಿಳಿನಲ್ಲಿ 'ಮುದಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ.

ಈ ವಿಷಯ ಧೃಢೀಕರಿಸಿದ ಸಿನೆಮಾದ ನಿರ್ಮಾಪಕ ಸೂರಪ್ಪ ಬಾಬು "ಹಾಡೊಂದಕ್ಕೆ ಸುದೀಪ್ ಮತ್ತು ನಿತ್ಯಾ ಧ್ವನಿ ನೀಡಿದ್ದಾರೆ. ಇದರ ರೆಕಾರ್ಡಿಂಗ್ ಮುಗಿದಿದೆ. ನಾಗೇಂದ ಪ್ರಸಾದ್ ಸಾಹಿತ್ಯ ರಚನೆ ಮಾಡಿದ್ದು, ಕನ್ನಡ ಆವೃತ್ತಿಯನ್ನು ಈ ನಟರು ಹಾಡಿದ್ದಾರೆ" ಎಂದಿದ್ದಾರೆ.

ಈ ಹಾಡಿನ ಚಿತ್ರೀಕರಣವನ್ನು ಇನೊವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಸಿದ್ದು, ಇದಕ್ಕೆ ಎ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೂಡ ಸುದೀಪ್ ಹಲವಾರು ಹಾಡುಗಳನ್ನು ಹಾಡಿದ್ದಾರೆ. ನಿತ್ಯಾ ಕನ್ನಡ ಸಿನೆಮಾದಲ್ಲಿ ಮೊದಲ ಬಾರಿಗೆ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸಿನೆಮಾದ ಚಿತ್ರೀಕರಣ ಬಹುತೇಕ ಸಂಪೂರ್ಣಗೊಂದಿದ್ದು, ಚಿತ್ರೀಕರಣದ ನಂತರ ಕೆಲಸಗಳಲ್ಲಿ ಚಿತ್ರ ತಂಡ ನಿರತವಾಗಿದೆಯಂತೆ. "ಜೂನ್ ಅಂತ್ಯಕ್ಕೆ ಸೆನ್ಸಾರ್ ಮಂಡಲಿಯ ಮುಂದೆ ಸಿನೆಮಾ ಇರಿಸಲಿದ್ದೇವೆ. ಜುಲೈ ನಲ್ಲಿ ರಜನಿಕಾಂತ್ ಅವರ ಬಹುನಿರೀಕ್ಷಿತ 'ಕಬಾಲಿ' ಬಿಡುಗಡೆಯಾದ ಒಂದು ಅಥವಾ ಎರಡು ವಾರದ ನಂತರ ನಮ್ಮ ಸಿನೆಮಾ ಬಿಡುಗಡೆ ಮಾಡಲಿದ್ದೇವೆ.

"ಕನ್ನಡ ಮತ್ತು ತಮಿಳು ಆವೃತ್ತಿಗಳನ್ನು ಒಟ್ಟಿಗೆ ಬಿಡುಗಡೆ ಮಾಡಲಿದ್ದು, ಜಾಗತಿಕವಾಗಿ ೧೦೦೦ಕ್ಕೂ ಹೆಚ್ಚು ತೆರೆಗಳಲ್ಲಿ ಬಿಡುಗಡೆಯಾಗಲಿದೆ. ಇದು ೨೦೧೬ ರ ಅತಿ ದೊಡ್ಡ ಹಿಟ್ ಸಿನೆಮಾ ಆಗಲಿದೆ. ಈ ಅದ್ಭುತ ಸಿನೆಮಾ ಹೊರಬರಲು ಸಹಕರಿಸಿದ ಸುದೀಪ್ ಅವರಿಗೆ ಧನ್ಯವಾದ ಹೇಳಬೇಕು" ಎನ್ನುತಾರೆ ನಿರ್ಮಾಪಕ.

ಟಿ ಶಿವಕುಮಾರ್ ಚಿತ್ರ ಕಥೆ ರಚಿಸಿದ್ದು, ತಮಿಳಿನ ಖ್ಯಾತ ನಿರ್ದೇಶಕ ರವಿಕುಮಾರ್ ನಿರ್ದೇಶಕ. ಮುಖೇಶ್ ತಿವಾರಿ, ಶರತ್ ಲೋಹಿತಾಶ್ವ, ನಾಸರ್, ರವಿ ಶಂಕರ್, ಚಿಕ್ಕಣ್ಣ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT