ಸಿನಿಮಾ ಸುದ್ದಿ

63ನೇ ಫಿಲ್ಮ್ ಫೇರ್: ಅತ್ಯುತ್ತಮ ಚಿತ್ರ ರಂಗಿತರಂಗ, ಪುನೀತ್, ಪಾರುಲ್‌ ಅತ್ಯುತ್ತಮ ನಟ-ನಟಿ

Vishwanath S

ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ರಣವಿಕ್ರಮ ಚಿತ್ರದ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಆಟಗಾರ ಚಿತ್ರಕ್ಕಾಗಿ ಪಾರುಲ್ ಯಾದವ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೈದರಾಬಾದ್ ನಲ್ಲಿ ನಿನ್ನೆ ನಡೆದ 63ನೇ ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಂಗಿತರಂಗ ಚಿತ್ರ ಬರೋಬ್ಬರಿ 4 ಪ್ರಶಸ್ತಿಗಳು ಬಾಚಿಕೊಂಡಿತು.

ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ರಂಗಿತರಂಗ ಚಿತ್ರ ಭಾಜನವಾದರೆ, ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಇನ್ನು ಡೈಲಾಗ್ ಕಿಂಗ್ ಸಾಯಿಕುಮಾರ್ ರಂಗಿತರಂಗ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, ಕರೆಯೋಲೆ ಎಂಬ ಹಾಡಿನ ಮೂಲಕ ಗಮನ ಸೆಳೆದಿದ್ದ ಇಂಚರಾ ರಾವ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದರು.

ಫಿಲ್ಮ್‌ಫೇರ್ ಪ್ರಶಸ್ತಿಯಲ್ಲಿ ಕನ್ನಡದ 'ರಣವಿಕ್ರಮ' ಚಿತ್ರದ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 'ಆಟಗಾರ' ಚಿತ್ರಕ್ಕಾಗಿ ಪಾರುಲ್ ಯಾದವ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ್ರೆ,  'ನಾನು ಅವನಲ್ಲ ಅವಳು' ಚಿತ್ರಕ್ಕಾಗಿ ವಿಮರ್ಶಕರ ಪ್ರಶಸ್ತಿ ಸಂಚಾರಿ ವಿಜಯ್ ಮುಡಿಗೇರಿದೆ.

ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಕನ್ನಡದ ಚಿತ್ರಗಳು

ಅತ್ಯುತ್ತಮ ಚಿತ್ರ:
ರಂಗಿತರಂಗ

ಅತ್ಯುತ್ತಮ ನಿರ್ದೇಶಕ: ಅನೂಪ್ ಭಂಡಾರಿ(ರಂಗಿತರಂಗ)

ಅತ್ಯುತ್ತಮ ನಟ: ಪುನೀತ್ ರಾಜ್‌ಕುಮಾರ್(ರಣವಿಕ್ರಮ)

ಅತ್ಯುತ್ತಮ ನಟಿ: ಪಾರುಲ್ ಯಾದವ್(ಆಟಗಾರ)

ಅತ್ಯುತ್ತಮ ಪೋಷಕ ನಟ: ಸಾಯಿಕುಮಾರ್(ರಂಗಿತರಂಗ)

ಅತ್ಯುತ್ತಮ ಪೋಷಕ ನಟಿ: ಸುಧಾರಾಣಿ(ವಾಸ್ತುಪ್ರಕಾರ)

ಅತ್ಯುತ್ತಮ ಸಂಗೀತ ನಿರ್ದೇಶಕ: ಶ್ರೀಧರ್ ವಿ ಸಂಭ್ರಮ್(ಕೃಷ್ಣಲೀಲಾ)

ಅತ್ಯುತ್ತಮ ಸಾಹಿತ್ಯ: ಜಯಂತ್ ಕಾಯ್ಕಿಣಿ(ನೆನಪೆ ನಿತ್ಯ ಮಲ್ಲಿಗೆ-ಕೆಂಡಸಂಪಿಗೆ)

ಅತ್ಯುತ್ತಮ ಹಿನ್ನೆಲೆ ಗಾಯಕ: ಸಂತೋಷ್ ವೆಂಕಿ(ರಾಜಾರಾಣಿಯಂತೆ-ರಾಟೆ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಇಂಚರಾ ರಾವ್(ಕರೆಯೋಲೆ-ರಂಗಿತರಂಗ)

SCROLL FOR NEXT