ನಟಿ ಮೇಘನಾ 
ಸಿನಿಮಾ ಸುದ್ದಿ

ಅಂಕಿಅಂಶಗಳೇ ಯಶಸ್ಸಿಗೆ ಮಾನದಂಡವಲ್ಲ; 'ಲಕ್ಷ್ಮಣ' ನಾಯಕಿ ಮೇಘನಾ ರಾಜ್

ಕಳೆದ ವರ್ಷ 'ಆಟಗಾರ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಮೇಘನಾಗೆ 'ಲಕ್ಷ್ಮಣ' ೨೦೧೬ರ ಮೊದಲ ಬಿಡುಗಡೆ. "ನಾನು ಪ್ರತಿ ಆರು ತಿಂಗಳಿಗೊಂದು ಸಿನೆಮಾ ಮಾಡುವ ಕನಸು ಕಂಡಿಲ್ಲ.

ಬೆಂಗಳೂರು: ಕಳೆದ ವರ್ಷ 'ಆಟಗಾರ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಮೇಘನಾಗೆ 'ಲಕ್ಷ್ಮಣ' ೨೦೧೬ರ ಮೊದಲ ಬಿಡುಗಡೆ. "ನಾನು ಪ್ರತಿ ಆರು ತಿಂಗಳಿಗೊಂದು ಸಿನೆಮಾ ಮಾಡುವ ಕನಸು ಕಂಡಿಲ್ಲ. ಅದು ನನ್ನ ಯೋಜನೆಯೂ ಅಲ್ಲ. ಹೀರೋಗಳು ಪ್ರತಿ ಸಿನೆಮಾಗೂ ಅಷ್ಟೊಂದು ಸಮಯ ತೆಗೆದುಕೊಳ್ಳಬಹುದಾದರೆ, ನಾಯಕ ನಟಿಗೂ ಅದೇ ಅನ್ವಯಿಸುತ್ತದೆ. ಕೊನೆಗೆ ಪ್ರೇಕ್ಷಕರಿಗೆ ನೀಡುತ್ತಿರುವ ಸಿನೆಮಾದ ಗುಣಮಟ್ಟವೇ ಮುಖ್ಯ ಎನ್ನುತ್ತಾರೆ ನಟಿ.

ಈ ವಾರ ಬಿಡುಗಡೆಯಾಗಲಿರುವ 'ಲಕ್ಷ್ಮಣ' ಚಿತ್ರೀಕರಣ ದೀರ್ಘ ಕಾಲ ಹಿಡಿದಿದ್ದು ಏಕೆಂದರೆ ಅದು ದೊಡ್ಡ ಬಜೆಟ್ ಸಿನೆಮಾ ಅಂತೆ. ಅಲ್ಲದೆ ರಾಜಕಾರಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಅವರನ್ನು ಸಿನೆಮಾಗೆ ಪರಿಚಯಿಸುತ್ತಿದ್ದಾರೆ ನಿರ್ದೇಶಕ ಆರ್ ಚಂದ್ರು.

"ಹಾಡುಗಳು ಮತ್ತು ನೃತ್ಯಗಳ ಮೇಲೆ ನಿಂತಿರುವ ಮಾಮೂಲಿ ಕಮರ್ಷಿಯಲ್ ಸಿನೆಮಾ ಅಲ್ಲ ಇದು. ಸೂಕ್ಷ್ಮತೆಯ ಸಿನೆಮಾ. ನನಗೆ ಸಾಮಾನ್ಯ ಸಿನೆಮಾಗಳಲ್ಲಿ ನಾಯಕ ನಟಿಯ ಪಾತ್ರ ವಹಿಸಲು ಇಷ್ಟ ಇಲ್ಲ. ಈ ಸಿನೆಮಾದಲ್ಲಿ ಗಟ್ಟಿ ಪಾತ್ರವನ್ನು ನಿರ್ವಹಿಸಿದ್ದೇನೆ" ಎನ್ನುತ್ತಾರೆ ಮೇಘನಾ.

ಚೊಚ್ಚಲ ನಟ ಅನೂಪ್ ಬಗ್ಗೆಯೂ ಪ್ರಶಂಸೆಯ ಮಾತುಗಳನ್ನಾಡುವ ನಟಿ "ಅನೂಪ್ ಚಲನಶೀಲ ವ್ಯಕ್ತಿ. ಅವರು ಕಲಿಯುವುದಕ್ಕೆ ಸದಾ ಉತ್ಸುಕರಾಗಿದ್ದರು. ದೊಡ್ಡ ಕುಟುಂಬದಿಂದ ಬಂದಿದ್ದರೂ ತಮ್ಮ ಪಾತ್ರಕ್ಕಾಗಿ ಕಷ್ಟ ಪಟ್ಟು ದುಡಿದರು" ಎನ್ನುತ್ತಾರೆ ಮೇಘನಾ.

ತಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವಾದ್ದರಿಂದ ಸೆಟ್ ಗೆ ಬರುತ್ತಿದ್ದ ರಾಜಕಾರಣಿ ಎಚ್ ಎಂ ರೇವಣ್ಣನವರೊಂದಿಗೆ ಮಾತುಕತೆ ಸಿನೆಮಾಗೆ ಮೀಸಲಾಗುತ್ತಿತ್ತು ಎನ್ನುವ ನಟಿ "ಒಳ್ಳೆಯ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಕ್ಕೆ ಖುಷಿಯಿದೆ. ಅವರ ಸಿನೆಮಾ ಜ್ಞಾನದ ಬಗ್ಗೆ ನನಗೆ ಅಪಾರ ಮೆಚ್ಚುಗಿಯಿದೆ. ಅನೂಪ್ ಡಬ್ಬಿಂಗ್ ಮಾಡುವ ವೇಳೆಯಲ್ಲಿ ಅವರು ಬಹಳ ಸಹಾಯ ಮಾಡಿದರು. ರಾಜಕೀಯದಲ್ಲಿ ಬಹಳ ಬ್ಯುಸಿಯಾಗಿದ್ದರೂ ನಿರ್ಮಾಪಕನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರು" ಎನ್ನುತಾರೆ ನಟಿ.

'ಲಕ್ಷ್ಮಣ' ನ ಬಿಡುಗಡೆಯ ನಂತರ 'ಭುಜಂಗ' ಮತ್ತು 'ಅಲ್ಲಮ ಪ್ರಬು' ಸಿನೆಮಾಗಳ ಬಿಡುಗಡೆಯನ್ನು ಮೇಘನಾ ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT