ಪುನೀತ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಹುಬ್ಬಳ್ಳಿಯಲ್ಲಿ ದೊಡ್ಮನೆ ಹುಡ್ಗ ಸಾಂಗ್ ಶೂಟಿಂಗ್ : ಚೆನ್ನಮ್ಮಸರ್ಕಲ್‌ನಲ್ಲಿ ಜನಸಾಗರ

ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಹಾಡೊಂದರ ಚಿತ್ರೀಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆಯಿತು.ಈ ವೇಳೆ ನಾಯಕ ನಟ ...

ಹುಬ್ಬಳ್ಳಿ: ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಹಾಡೊಂದರ ಚಿತ್ರೀಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆಯಿತು.ಈ ವೇಳೆ ನಾಯಕ ನಟ 'ಪವರ್‌ ಸ್ಟಾರ್‌  ಪುನೀತ್‌ ರಾಜ್‌ಕುಮಾರ್‌' ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು   ಸೇರಿದ್ದರು.

ಪುನೀತ್‌ ಅವರು ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನೆಚ್ಚಿನ ನಟನೊಂದಿಗೆ ಫೋಟೋಗಾಗಿ,ಕೈಕುಲುಕಲು  ಜನ ಮುಗಿಬಿದ್ದ ಕಾರಣ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.  1993 ರಲ್ಲಿ ಬಿಡುಗಡೆಗೊಂಡ 'ಡಾ .ರಾಜ್‌ಕುಮಾರ್‌' ಅವರ 'ಆಕಸ್ಮಿಕ' ಚಿತ್ರದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು' ಇಂದೀಗೂ ಎಲ್ಲರ ಬಾಯಲ್ಲಿರುವ ನಿತ್ಯ ನೂತನ ಹಾಡು. ಆ ಹಾಡು  ಇದೇ ಚೆನ್ನಮ್ಮ ಸರ್ಕಲ್‌ನಲ್ಲಿ ಚಿತ್ರಿಕರಣಗೊಂಡಿದ್ದುಅಲ್ಲಿ ಅಣ್ಣಾವ್ರನ್ನು ನೋಡಲು ಜನಸಾಗರವೇ ಅಂದು ಮುಗಿ ಬಿದ್ದಿತ್ತು.

ಕಟ್ಟಡಗಳ ಮೇಲೆ ಜನ ನಿಂತುಕೊಂಡು ಚೀತ್ರಿಕರಣವನ್ನು  ನೋಡುತ್ತಿರುವ ರೋಮಾಂಚನಕಾರಿ ದೃಶ್ಯವನ್ನು ಹಾಡಿನಲ್ಲಿ ನೋಡಬಹುದಾಗಿದೆ. ಇದೇ ಸವಿ ನೆನಪನ್ನು ಪುನೀತ್‌ ಅವರು ಈ ಹಾಡಿನ ಚಿತ್ರೀಕರಣದ ಮೂಲಕ ನೆನಪಿಸಿದರು.

ಇನ್ನೂ ಸುಮಾರು 1.75ಕೋಟಿ ರು. ವೆಚ್ಚದಲ್ಲಿ ಹಾಡೊಂದರ ಚಿತ್ರೀಕರಣ ಮಾಡಲಾಗುತ್ತಿದೆ. ಅಭಿಮಾನಿಗಳೇ ನಮ್ಮ ಮನೆ ದೇವರು ಎಂಬ ಹಾಡಿಗಾಗಿ ಸುಮಾರು 180 ನೃತ್ಯಗಾರರು ಡ್ಯಾನ್ಸ್ ಮಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. 2016 ಆಗಸ್ಟ್ 12 ರಂದು ಚಿತ್ರ ತೆರೆ ಕಾಣಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT