ಬೆಂಗಳೂರು: 'ಯು ಟರ್ನ್' ಯಶಸ್ಸಿನಿಂದ ಉತ್ಸಾಹದಲ್ಲಿ ತೇಲುತ್ತಿರುವ ಶ್ರದ್ಧಾ ಶ್ರೀನಾಥ್ ಅವರಿಗೆ ವಿರಮಿಸಲು ಸಮಯ ಇಲ್ಲ. ಇನ್ನು ಹೆಸರಿಡದ ಚಿತ್ರದಲ್ಲಿ ನಿವಿನ್ ಪೌಲಿ ಜೊತೆಗೆ ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿರುವ ನಟಿ ಇಂದಿನಿಂದ ಸುನಿ ಅವರ 'ಆಪರೇಷನ್ ಅಲಮೇಲಮ್ಮ' ಸೆಟ್ ಗೆ ಸೇರಲಿದ್ದಾರೆ.
'ಯು ಟರ್ನ್ ಥ್ರಿಲ್ಲರ್ ಆಗಿದ್ದರಿಂದ ನನ್ನ ಪ್ರದರ್ಶನದ ಮೇಲೆ ಹೆಚ್ಚು ಗಮನ ಹರಿಸಬೇಕಿತ್ತು. ಬದಲಾವಣೆಗೆ ಒಂದು ತಿಳಿ ಹಾಸ್ಯದ ಸಿನಮಾ ಮಾಡಬೇಕೆಂದುಕೊಂಡೆ ಅದಕ್ಕೆ 'ಆಪರೇಷನ್ ಅಲಮೇಲಮ್ಮ' ಆಯ್ಕೆ ಮಾಡಿಕೊಂಡೆ. ಅಲ್ಲದೆ ಸುನಿ ಅವರ ಹಿಂದಿನ ಕೆಲಸಗಳನ್ನು ನೋಡಿ ಅವರ ಜೊತೆಗೆ ಕೆಲಸ ಮಾಡುವ ತವಕವಿತ್ತು ಎನ್ನುತ್ತಾರೆ ನಟಿ.
ಈ ಸಿನೆಮಾದ ಮೂಲಕ ರಂಗಭೂಮಿ ನಟ ಮನೀಶ್ ರಿಷಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ಅಭಿಷೇಕ್ ಕಾಸರಗೋಡು ಇದಕ್ಕೆ ಸಿನೆಮ್ಯಾಟೋಗ್ರಾಫರ್.
ಶ್ರದ್ಧಾ ಹೇಳುವಂತೆ ಸುನಿ ಅವರ ಈ ಚಿತ್ರ ಥ್ರಿಲ್, ಪ್ರೀತಿ ಮತ್ತು ನಿಗೂಢದ ಸಂಗಮ ಆದರೆ ಹಾಸ್ಯಭರಿತ ಚಿತ್ರವಂತೆ. ಅಪಹರಣ ಪ್ರಕರಣದ ಕಥಾಹಿನ್ನಲೆ ಹೊಂದಿದ್ದು ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆಯಂತೆ.
ನಿವಿನ್ ಪೌಲಿ ಜೊತೆ ನಟಿಸುತ್ತಿರುವ ಮೊದಲ ತಮಿಳು ಸಿನೆಮಾವನ್ನು ನಿರ್ದೇಶಿಸುತ್ತಿರುವವರು ಗೌತಮ್ ರಾಮಚಂದ್ರನ್. ಅಲ್ಲದೆ ಪ್ರದೀಪ್ ವರ್ಮಾ ನಿರ್ದೇಶನದ 'ಊರ್ವಿ' ಸಿನೆಮಾದ ಚಿತ್ರೀಕರಣ ಕೂಡ ಶ್ರದ್ಧಾ ಮುಗಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos