ಸೃಜನ್ ಜೋಡಿಯಾಗಿ ನಿಕಿತಾ ನಾರಾಯಣ್ 
ಸಿನಿಮಾ ಸುದ್ದಿ

ಸೃಜನ್ ಹುಟ್ಟುಹಬ್ಬದ ದಿನ 'ಗೋಲ್ ಮಾಲ್'

ಕಿರುತರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ- ನಟ ಸೃಜನ್ ಲೋಕೇಶ್ ಅವರ ಈ ವರ್ಷದ ಹುಟ್ಟುಹಬ್ಬ ವಿಶೇಷವಂತೆ! ಇಂದು ಅವರ ನೂತನ ಸಿನೆಮಾಗೆ ಚಾಲನೆ ನೀಡಲಾಗುತ್ತಿದೆ.

ಬೆಂಗಳೂರು: ಕಿರುತರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ- ನಟ ಸೃಜನ್ ಲೋಕೇಶ್ ಅವರ ಈ ವರ್ಷದ ಹುಟ್ಟುಹಬ್ಬ ವಿಶೇಷವಂತೆ! ಇಂದು ಅವರ ನೂತನ ಸಿನೆಮಾಗೆ ಚಾಲನೆ ನೀಡಲಾಗುತ್ತಿದೆ. ಸಿನೆಮಾದ ಹೆಸರು 'ಗೋಲ್ ಮಾಲ್ ಬ್ರದರ್ಸ್'
"ತಮಾಷೆ ಪ್ರಾರಂಭವಾಗಲಿದೆ ಮತ್ತು ನಾನು ಮತ್ತೊಂದು ಹಾಸ್ಯ ಸಿನೆಮಾ ಮಾಡಲು ಸಜ್ಜಾಗಿದ್ದೇನೆ" ಎನ್ನುತ್ತಾರೆ ಮಜಾ ಟಾಕೀಸ್ ಖ್ಯಾತಿಯ ಸೃಜನ್. ಸೃಜನ್ ಜೊತೆಗೆ ಚಿಕ್ಕಣ್ಣ ಮತ್ತು ರೂಪ್ ಶೆಟ್ಟಿ ನಟಿಸುತ್ತಿದ್ದಾರೆ. ತೆರೆ ಮೇಲೆ ಸೃಜನ್ ಜೋಡಿಯಾಗಿ ನಿಕಿತಾ ನಾರಾಯಣ್ ಕಾಣಿಸಿಕೊಳ್ಳಲಿದ್ದಾರೆ. 
ಇದು ರಿಮೇಕ್ ಸಿನೆಮಾ ಅಲ್ಲ ಎಂದು ಸ್ಪಷ್ಟಪಡಿಸುವ ಸೃಜನ್ "ನಾವು ಗೋಲ್ ಮಾಲ್ ಹೆಸರು ತೆಗೆದುಕೊಂಡದ್ದೇಕೆ ಎಂದರೆ ಇದು ಜಾಗತಿಕ ಪದ. ಮತ್ತು ಕಥೆಗೆ ಈ ಶೀರ್ಷಿಕೆ ಹೊಂದಿಕೊಳ್ಳುತ್ತದೆ" ಎನ್ನುತ್ತಾರೆ. 
ಸೃಜನ್ ಅವರ ಆಪ್ತ ಗೆಳೆಯ ದರ್ಶನ್ ಸಿನೆಮಾ ಮುಹೂರ್ತಕ್ಕೆ ಅತಿಥಿಯಾಗಲಿದ್ದಾರಂತೆ. ಎಂ ಎಸ್ ಶ್ರೀನಾಥ್ ನಿರ್ದೇಶನದ ಈ ಸಿನೆಮಾಗೆ ಅವರೇ ಮೊದಲು ಕ್ಲ್ಯಾಪ್ ಮಾಡಲಿದ್ದಾರಂತೆ. ಶ್ರೀನಾಥ್ ಅವರೇ ಕಥೆ ಮತ್ತು ಸ್ಕ್ರೀನ್ ಪ್ಲೇ ಬರೆದಿದ್ದು, ವೀನಸ್ ಮೂರ್ತಿ ಸಿನೆಮ್ಯಾಟೋಗ್ರಾಪಹ್ರ್ ಹಾಗೂ ಸತೀಶ್ ಆರ್ಯನ್ ಸಂಗೀತ ನಿರ್ದೇಶಕ. 
ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು 45 ದಿನಗಳ ವರೆಗೆ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ