ಸದ್ಯ ಟಿವಿಗಳಲ್ಲಿ ರಿಯಾಲಿಟಿ ಶೋಗಳದ್ದೆ ದರ್ಬಾರ್. ಇಂತಹ ರಿಯಾಲಿಟಿ ಶೋಗೆ ಹೊಸ ಸೇರ್ಪಡೆ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್.
ಹೌದು ಉದಯ ವಾಹಿನಿಯಲ್ಲಿ ಹೊಸ ಡ್ಯಾನ್ಸ್ ರಿಯಾಲಿಟಿ ಶೋ ಕಿಕ್ ಗೆ ವಿಶೇಷ ತೀರ್ಪುಗಾರರಾಗಿ ಬರುತ್ತಿದ್ದಾರೆ. ಶಿವಣ್ಣನನ್ನು ಪರಿಚಯಿಸೋ ಸಲುವಾಗಿ ಪ್ರೊಮೋಷನ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಈ ವಿಡಿಯೋದಲ್ಲಿ ಬ್ಲ್ಯಾಕ್ ಸೂಟ್ ತೊಟ್ಟು ಜೋಗಯ್ಯ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳ ಪೈಪೋಟಿಯಲ್ಲಿ ಕಿಕ್ ಗೆ ಕಿಕ್ ಕೊಡೋಕೆ ಶಿವರಾಜ್ ಕುಮಾರ್ ಸಜ್ಜಾಗಿದ್ದಾರೆ.