ಜಾಕಿ ಚಿತ್ರದ ಮೂಲಕ ಕನ್ನಡಿಗರ ಮನಗೆದಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಅವರು ಕನ್ನಡದ ಹುಡುಗನ ಜೊತೆ ಹಸೆಮಣೆ ಏರಲಿದ್ದಾರೆ.
ಈ ಹಿಂದೆ ಭಾವನಾ ಮದುವೆ ಆಗ್ತಿದಾರೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹರಿದಾಡಿತ್ತಾದ್ದರೂ, ಭಾವನಾ ಮನಗೆದ್ದ ನಾಯಕ ಯಾರು ಅನ್ನೋದು ಗೊತ್ತಿರಲಿಲ್ಲ. ಆದರೆ ಈಗ ಭಾವನಾ, ಚಿತ್ರ ನಿರ್ಮಾಪಕ ಮತ್ತು 'ನಾಯಕ' ಚಿತ್ರದ ಹೀರೋ ನವೀನ್ ಅವರೊಂದಿಗೆ ಸಪ್ತಪದಿ ತುಳಿಯೋದು ಪಕ್ಕ ಅಗಿದೆ.
ನವೀನ್ ಹಾಗೂ ಭಾವನಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೇ ಜೂನ್ ನಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.
ನಾಯಕ ಚಿತ್ರ ನವೀನ್ ಅವರ ಮೊದಲ ಸಿನಿಮಾ ಆಗಿದ್ದು, ಆನಂತರ ಅವರು ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ನವೀನ್ ಅವರ ತಂದೆ ಸೆಕ್ಯೂರಿಟಿ ಗಾರ್ಡ್ ಬಿಸ್ನೆಸ್ ನಡೆಸುತ್ತಿದ್ದಾರೆ,
ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ರೋಮಿಯೊ', ಕಿಚ್ಚ ಸುದೀಪ್‌ನ ಅಭಿನಯದ 'ವಿಷ್ಣುವರ್ಧನ್' ಹಾಗೂ 'ಬಚ್ಚನ್' ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics