ಸಿನಿಮಾ ಸುದ್ದಿ

ನಮ್ಮ ಜೀವನಗಳ 'ಆದರೆ'ಗಳ ನಡುವೆ ಸುತ್ತುವ '...ರೆ': ಸುನಿಲ್ ಕುಮಾರ್ ದೇಸಾಯಿ

Guruprasad Narayana

ಬೆಂಗಳೂರು: 'ತರ್ಕ', 'ಉತ್ಕರ್ಷ', 'ಸ್ಪರ್ಶ', 'ಬೆಳದಿಂಗಳ ಬಾಲೆ', 'ನಮ್ಮೂರ ಮಂದಾರ ಹೂವೆ' ಇಂತಹ ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ನೀಡಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ದೀರ್ಘ ಕಾಲದ ವಿರಾಮದ ನಂತರ '...ರೆ' ಸಿನೆಮಾದ ಮೂಲಕ ನಿರ್ದೇಶನಕ್ಕೆ ಹಿಂದಿರುಗಿದ್ದಾರೆ. ಮೂಲಗಳ ಪ್ರಕಾರ ಈ ಸಿನೆಮಾ ಬಾದಲ್ ಸರ್ಕಾರ್ ಅವರ 'ಬಲ್ಲಾಬ್ಪುರೆರ್ ರೂಪಕಥ' ನಾಟಕಕ್ಕೆ ಹೋಲಿಕೆಯಿದೆಯಂತೆ.

ನಿರ್ದೇಶಕರೇ ಹೇಳುವಂತೆ ಮೂರೂ ವರ್ಷಗಳ ಕೆಳಗೆ ತಾವು ಪ್ರಾರಂಭಿಸಿದ್ದ 'ತಂದಾನ ತಂದಾನ' ಸಿನೆಮಾವನ್ನು '...ರೆ' ಎಂದು ಮರು ಹೆಸರಿಸಲಾಗಿದೆಯಂತೆ. ಪ್ರೀತಿ, ಮದುವೆ ಹಾಗು ನಮ್ಮ ಜೀವನಗಳಲ್ಲಿ 'ಆದರೆ'ಗಳ ಸುತ್ತ ಸಿನೆಮಾ ಸುತ್ತುದಂತೆ.

"ಈ ಸಿನೆಮಾ ಜನರಿಗೆ ಅರಿವು ಮೂಡಿಸುತ್ತದೆ. ನಾನು ನನ್ನ ಸಿನೆಮಾಗಳಲ್ಲಿ ಸಂದೇಶ ನೀಡಲು ಇಷ್ಟಪಡುವುದಿಲ್ಲವಾದರು, ಜನಕ್ಕೆ ಸಂದೇಶ ಸಿಗುವುದಂತೂ ನಿಜ" ಎನ್ನುತ್ತಾರೆ ಸುನಿಲ್ ಕುಮಾರ್ ದೇಸಾಯಿ.

ಅನಂತನಾಗ್, ರಮೇಶ್ ಅರವಿಂದ್, ಲೋಕನಾಥ್, ಜಿ ಕೆ ಗೋವಿಂದರಾವ್, ಮಾಸ್ಟರ್ ಹಿರಣ್ಣಯ್ಯ, ರಮೇಶ್ ಭಟ್, ಶಿವರಾಂ, ಸುಮನ್ ನಗರ್ಕರ್, ಹರ್ಷ ಪೂಣಚ್ಚ ಹೀಗೆ ಬಹು ದೊಡ್ಡ ತಾರಾಗಣವಿರುವ ಈ ಸಿನೆಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವುದಂತೂ ನಿಜ. ಹಂಸಲೇಖ ಅವರ ಸಂಗೀತ ಕೂಡ ಸಿನೆಮಾಗಿದೆ.

"ಈ ಸಿನೆಮಾ ಗೆದ್ದರೆ, ರೋಚಕ ಥ್ರಿಲ್ಲರ್ ಸಿನೆಮಾ ಒಂದನ್ನು ಮಾಡುತ್ತೇನೆ" ಎನ್ನುತ್ತಾರೆ ಸುನಿಲ್ ಕುಮಾರ್ ದೇಸಾಯಿ.




SCROLL FOR NEXT