ರಸ್ತೆ ಅಪಘಾತದಲ್ಲಿ ಅಸುನೀಗಿದ ತಮಿಳು ನಟ ಸೆಲ್ವಕುಮಾರ್ 
ಸಿನಿಮಾ ಸುದ್ದಿ

ರಸ್ತೆ ಅಪಘಾತದಲ್ಲಿ ತಮಿಳು ನಟ ಸೆಲ್ವಕುಮಾರ್ ನಿಧನ

ದ್ವಿಚಕ್ರ ವಾಹನದ ಅಪಘಾತದಲ್ಲಿ ಜನಪ್ರಿಯ ತಮಿಳು ನಟ ಸೆಲ್ವಕುಮಾರ್ ಶುಕ್ರವಾರ ಅಸುನೀಗಿದ್ದಾರೆ.

ಚೆನ್ನೈ: ದ್ವಿಚಕ್ರ ವಾಹನದ ಅಪಘಾತದಲ್ಲಿ ಜನಪ್ರಿಯ ತಮಿಳು ನಟ ಸೆಲ್ವಕುಮಾರ್ ಶುಕ್ರವಾರ ಅಸುನೀಗಿದ್ದಾರೆ.

"ಶುಕ್ರವಾರ ರಾತ್ರಿ, ಕಾರ್ಯಕ್ರಮವೊಂದರಿಂದ ಗೆಳೆಯ-ನಟ ಕೋವೈ ಸೆಂಥಿಲ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದಾಗ, ಮುಂದಿನ ಚಕ್ರಕ್ಕೆ ಬ್ರೇಕ್ ವೈರ್ ಗಳು ಸಿಕ್ಕಿಹಾಕಿಕೊಂಡು ಗಾಡಿ ಕೆಳಗೆ ಬಿದ್ದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಸೆಲ್ವಕುಮಾರ್ ಅವರಿಗೆ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸತ್ತಿದ್ದಾರೆ ಮತ್ತು ಅವರ ಗೆಳೆಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸಣ್ಣ ಪುಟ್ಟ ಪಾತ್ರಗಳಲ್ಲಿ ಸುಮಾರು ೩೦೦ ಸಿನೆಮಾಗಳಲ್ಲಿ ನಟಿಸಿರುವ ಸೆಲ್ವಕುಮಾರ್, 'ಅನಿಯನ್' ಮತ್ತು 'ರಮಣಾ' ಸಿನೆಮಾಗಳಲ್ಲಿನ ಪಾತ್ರಗಳಳಿಗೆ ಅತಿ ಹೆಚ್ಚು ಜನಪ್ರಿಯರಾಗಿದ್ದರು.

ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ತೊರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!