ಸಿನಿಮಾ ಸುದ್ದಿ

ರವಿಬಾಬು ನಿರ್ದೇಶನದಲ್ಲಿ ತೆಲುಗಿಗೆ ಪಾದಾರ್ಪಣೆ ಮಾಡಲಿರುವ ನಭಾ ನಟೇಶ್

Guruprasad Narayana

ಚೆನ್ನೈ: ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಎದುರು 'ವಜ್ರಕಾಯ' ಸಿನೆಮಾದಲ್ಲಿ ನಟಿಸುವ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದ ನಟಿ ನಭಾ ನಟೇಶ್ ಈಗ ನಟ-ನಿರ್ದೇಶಕ ರವಿಬಾಬು ಅವರ ಮುಂದಿನ ಚಿತ್ರದಲ್ಲಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

"ಈ ಸಿನೆಮಾದಲ್ಲಿ ಹೊಸಬರಾದ ಅಭಿಷೇಕ್ ಮತ್ತು ನಭಾ ನಟಿಸಲಿದ್ದಾರೆ. ಕನ್ನಡ ಸಿನೆಮಾದಲ್ಲಿ ಅವರ ನಟನೆ ನೋಡಿ ಸ್ಫೂರ್ತಿಗೊಂಡು ರವಿ ಪಾತ್ರ ನೀಡಿದರು. 'ವಜ್ರಕಾಯ'ದಲ್ಲಿ ಮಾಡಿದ ಪಾತ್ರಕ್ಕಿಂತಲೂ ವಿಭಿನ್ನವಾದ ಪಾತ್ರದಲ್ಲಿ ನಟಿಸಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಈ ತಿಂಗಳ ಕೊನೆಯ ಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸುರೇಶ್ ಪ್ರೊಡಕ್ಷನ್ಸ್ ಸಿನೆಮಾವನ್ನು ನಿರ್ಮಿಸುತ್ತಿದ್ದು, ಉಳಿದ ತಾರಾಗಣ ಇನ್ನೂ ಅಂತಿಗೊಳ್ಳಬೇಕಿದೆ.

SCROLL FOR NEXT