ನಟ ವಿಕ್ರಮ್ 
ಸಿನಿಮಾ ಸುದ್ದಿ

ವಿಕ್ರಮ್ ಗೆ ರಾಷ್ಟ್ರಪ್ರಶಸ್ತಿ ಇಲ್ಲ; ಪಿ ಸಿ ಶ್ರೀರಾಮ್ ಗೆ ಅಸಮಧಾನ

೬೩ನೇ ರಾಷ್ಟ್ರಪ್ರಶಸ್ತಿಗಳು ಘೋಷಣೆಯಾದ ಮೇಲೆ ಪ್ರಶಸ್ತಿ ವಿಜೇತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದರೆ, ಕೆಲವು ಕಲಾವಿದರ

ಬೆಂಗಳೂರು: ೬೩ನೇ ರಾಷ್ಟ್ರಪ್ರಶಸ್ತಿಗಳು ಘೋಷಣೆಯಾದ ಮೇಲೆ ಪ್ರಶಸ್ತಿ ವಿಜೇತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದರೆ, ಕೆಲವು ಕಲಾವಿದರ ಶ್ರಮಕ್ಕೆ ಮನ್ನಣೆ ದೊರೆತಿಲ್ಲ ಎಂದು ಇನ್ನೂ ಹಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶಂಕರ್ ನಿರ್ದೇಶನದ 'ಐ' ನಟನೆಗಾಗಿ ನಟ ವಿಕ್ರಮ್ ಪ್ರಶಸ್ತಿ ಗಳಿಸುತ್ತಾರೆಂದೇ ಅವರ ಅಭಿಮಾನಿಗಳು ನಂಬಿದ್ದರು. ಆದರೆ ಅವರಿಗೆ ಪ್ರಶಸ್ತಿ ದಕ್ಕದೇ ಹೋಗಿರುವುದರಿಂದ ಹಲವಾರು ಜನ ನಿರಾಶರಾಗಿದ್ದಾರೆ. ಅವರಲ್ಲಿ ಖ್ಯಾತ ಸಿನೆಮ್ಯಾಟೋಗ್ರಾಫರ್ ಪಿ ಸಿ ಶ್ರೀರಾಮ್ ಕೂಡ ಒಬ್ಬರು.

ಟ್ವಿಟ್ಟರ್ ಮೊರೆ ಹೋಗಿರುವ ಶ್ರೀರಾಮ್ "ಈ ವರ್ಷ ರಾಷ್ಟ್ರಪ್ರಶಸ್ತಿ ಗೆದ್ದ ಎಲ್ಲರಿಗೂ ಅಭಿನಂದನೆಗಳು. ನಿಮ್ಮಲ್ಲರ ಮೇಲೆ ಹೆಮ್ಮೆಯಿದೆ. ಆದರೆ ವಿಕ್ರಮ್ ಗೆ ರಾಷ್ಟ್ರ ಪ್ರಶಸ್ತಿ ಬಂದಿಲ್ಲ. ಕೆಲವು ಬಾರಿ ರಾಷ್ಟ್ರ ಪ್ರಶಸ್ತಿ ಮುಖ್ಯಾಂಶಗಳನ್ನೇ ಮರೆತುಬಿಡುತ್ತದೆ. ಇದು ವಿಕ್ರಮ್ ಅವರಿಗೆ ಆದ ನಷ್ಟವಲ್ಲ, ರಾಷ್ಟ್ರ ಪ್ರಶಸ್ತಿಗಳಿಗೆ ಆದ ನಷ್ಟ" ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!