'ಡಿ ಡಿ ಎಲ್ ಜೆ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಡಿ ಡಿ ಎಲ್ ಜೆ' ಇಂದಿಗೂ ಅತಿ ನೆಚ್ಚಿನ ಬಾಲಿವುಡ್ ಪ್ರೇಮಕಥೆ: ಸಮೀಕ್ಷೆ

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ', ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ', ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ ನಿತ್ಯ ಹಸಿರಿನ ಅತಿ ಹೆಚ್ಚಿನ ಜನಪ್ರಿಯ ಬಾಲಿವುಡ್ ಪ್ರೇಮಕಥೆಯ ಚಿತ್ರವಾಗಿ ಹೊರಹೊಮ್ಮಿದೆ.

ಅಂತರ್ಜಾಲ ಸಮೀಕ್ಷೆ ಮತ್ತು ಮಾರುಕಟ್ಟೆ ಸಂಶೋಧನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸೊಗೋಸರ್ವೇ ಮಾಡಿರುವ ಸಮೀಕ್ಷೆಯ ಪ್ರಕಾರ ಆದಿತ್ಯ ಚೋಪ್ರಾ ನಿರ್ದೇಶನದ, ರಾಜ್ (ಶಾರುಕ್ ಖಾನ್) ಮತ್ತು ಸಿಮ್ರಾನ್ (ಕಾಜೋಲ್) ಪಾತ್ರಗಳ ನಡುವಿನ ಬಾಲಿವುಡ್ ಪ್ರೇಮಕತೆ ವಿವಿಧ ವಯಸ್ಸಿನ ಜನರ ಮಧ್ಯೆ ಜನಪ್ರಿಯ ಸಿನೆಮಾ ಆಗಿ ಉಳಿದಿದೆ ಎಂದು ತಿಳಿಸಿದೆ.

ಮುಂಬೈ, ದೆಹಲಿ, ಪುಣೆ, ಕೋಲ್ಕತ್ತ, ಹೈದರಾಬಾದ್ ಮುಂತಾದ ನಗರಗಳಲ್ಲಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ೪೧೦೦ ಜನರಲ್ಲಿ ಶೇಕಡಾ ೪೭.೩೩ ಜನ 'ಡಿ ಡಿ ಎಲ್ ಜೆ' ಬಾಲಿವುಡ್ ನ ನಿತ್ಯ ಹಸಿರಿನ ಪ್ರೇಮ ಕಥೆ ಎಂದು ಆಯ್ಕೆ ಮಾಡಿದ್ದಾರೆ.

ಯುವಕರಷ್ಟೇ ಅಲ್ಲ ೩೬ ವಯಸ್ಸಿನ ಮೇಲ್ಪಟ್ಟ ವಯಸ್ಕರು ಕೂಡ ಈ ಸಿನೆಮಾವನ್ನು ಮೆಚ್ಚಿದ್ದಾರಂತೆ. ೩೬ ರಿಂದ ೫೦ ವಯಸ್ಸಿನ ಜನರಲ್ಲಿ ೬೨% 'ಡಿ ಡಿ ಎಲ್ ಜೆ' ಬಾಲಿವುಡ್ ನ ನಿತ್ಯ ಹಸಿರಿನ ಪ್ರೇಮ ಕಥೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪಟ್ಟಿಯಲ್ಲಿ 'ಡಿ ಡಿ ಎಲ್ ಜೆ' ನಂತರದ ಸ್ಥಾನದಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರ 'ಆಶಿಕಿ-೨' (ಶೇಕಡ ೧೪.೬೬), ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಟನೆಯ 'ಬಾಜಿರಾವ್ ಮಸ್ತಾನಿ' (೧೧.೯೯%), ಅರ್ಜುನ್ ಕಪೂರ್ ಮತ್ತು ಆಲಿಯಾ ಭಟ್ ಅವರ '೨ ಸ್ಟೇಟ್ಸ್' (೫.೮೪%), ಶಹೀದ್ ಕಪೂರ್ ಮತ್ತು ಕರೀನಾ ಕಪೂರ್ ಜೋಡಿಯ 'ಜಬ್ ವಿ ಮೆಟ್' (೫.೩೫%) ಹಾಗೂ ಶಾರುಕ್ ಖಾನ್ ಮತ್ತು ಪ್ರೀತಿ ಜಿಂಟಾ ನಟನೆಯ 'ವೀರ್ ಜರಾ' (೫.೦೮%) ಸಿನೆಮಾಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NCERT Row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

ತಮಿಳನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಜಯಲಲಿತಾ ನೆಚ್ಚಿನ ಶಿಷ್ಯ- ಮಾಜಿ ಸಿಎಂ ಪನ್ನೀರ್‌ಸೆಲ್ವಂ DMK ಸೇರ್ಪಡೆ

T20 World Cup 2026: ಜಿಂಬಾಬ್ವೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ರಿಂಕು ಸಿಂಗ್‌ಗೆ ಆಘಾತ; ತಂದೆ ಖಾನ್ ಚಂದ್ ನಿಧನ!

ನಮ್ಮ ತಾಳ್ಮೆಯ ಮಿತಿ ಮೀರಿದೆ, ಬಹಿರಂಗ ಯುದ್ಧ ಆರಂಭ: ಅಫ್ಘಾನ್ ಮಿಲಿಟರಿ ದಾಳಿಗೆ ಪಾಕ್‌ನಿಂದ ಪ್ರತ್ಯುತ್ತರ

SCROLL FOR NEXT