ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮುಂಬೈ ಬೆಡಗಿ ಆಮದಾಗಿದ್ದಾರೆ. 'ಜಾನ್ ಜಾನಿ ಜನಾರ್ಧನ' ನಿರ್ಮಾಪಕರು ಕಾಮ್ನಾ ರಣಾವತ್ ಅವರನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿದ್ದಾರೆ.
ಬಹುತಾರಾಗಣದ ಈ ಸಿನೆಮಾವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ನಾಯಕನಟರಾಗಿ ಅಜಯ್ ರಾವ್ ಕೃಷ್ಣ ಮತ್ತು ಯೋಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಮಾಲಾಶ್ರೀ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ನಾವು ಹಲವಾರು ನಟಿಯರನ್ನು ಪರಿಗಣಿಸಿದ್ದೆವು, ಕೊನೆಗೆ ಕಾಮ್ನಾರನ್ನು ಆಯ್ಕೆ ಮಾಡಿದೆವು. ಅವರು ಕಥೆಗೆ ಹೊಂದಿಕೊಳ್ಳುತ್ತಾರೆ" ಎನ್ನುತ್ತಾರೆ ಗುರುರಾಜ್.
ರೂಪದರ್ಶಿಯಾಗಿದ್ದು ನಟಿಯಾಗಿರುವ ಕಾಮ್ನಾ ಹೆಚ್ಚಾಗಿ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಎಲ್ ಪದ್ಮನಾಭ್, ಕೆ ಗಿರೀಶ್ ಮತ್ತು ಶಶಿಕಿರಣ್ ನಿರ್ಮಾಪಕರಾಗಿರುವ ಎಂ ಆರ್ ಪಿಕ್ಚರ್ಸ್ ಬ್ಯಾನರ್ ಅಡಿ ಸಿನೆಮಾ ನಿರ್ಮಾಣಗೊಳ್ಳುತ್ತಿದ್ದು ಮೇ ೯ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.