ಸಿನಿಮಾ ಸುದ್ದಿ

ನಟಿಯರಿಗೆ ನೀಡುವ ಸಂಭಾವನೆಯ ಬಗ್ಗೆ ಐಂದ್ರಿತಾ ರೇ ಆಕ್ರೋಶ

Guruprasad Narayana

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ನೀಡುವ ಸಂಭಾವನೆಯ ಬಗ್ಗೆ ಐಂದ್ರಿತಾ ರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ತಮ್ಮ ಮುಂದಿನ ಚಿತ್ರ 'ನಿರುತ್ತರ'ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಟಿ, ತಾವು ಇತ್ತೀಚೆಗೆ ಕೆಲವೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇಕೆ ಎಂಬುದಕ್ಕೆ ಉತ್ತರಿಸಿದ್ದಾರೆ.

"ನನಗೆ ಒಳ್ಳೆ ಸ್ಕ್ರಿಪ್ಟ್ ಗಳು ಬರುತ್ತವೆ ಆದರೆ ಸಂಭಾವನೆ ಬಗ್ಗೆ ಚರ್ಚಿಸಿದಾಗ ನಿರ್ಮಾಪಕರು ಓಡಿ ಹೋಗಿಬಿಡುತ್ತಾರೆ. ಇದೇ ನನ್ನ ದೂರು. ಹಾಲಿವುಡ್ ಒಳಗೊಂಡಂತೆ ಪ್ರತಿ ಸಿನೆಮಾ ರಂಗದಲ್ಲೂ ನಾಯಕನಟಿಗೆ ನಾಯಕನಿಂಗಿಂತಲೂ ಸಂಭಾವನೆ ಕಡಿಮೆ. ಆದಂತೆ ನಮ್ಮಲ್ಲಿ ಈ ವ್ಯತ್ಯಾಸ ಅತಿ ದೊಡ್ಡದು. ಸ್ಯಾಂಡಲ್ ವುಡ್ ನಲ್ಲಿ ಎಷ್ಟೋ ಜನ ನಟಿಯರು ನಾಯಕರಿಗೆ ಸಿಗುವ ಸಂಭಾವನೆಯ ಕೆಲವ ೫ ರಿಂದ ೧೦% ರಷ್ಟು ಮಾತ್ರ ಪಡೆಯುತ್ತಾರೆ. ಇದು ಅತಿ ಕಡಿಮೆ ಮತ್ತು ಮತ್ತು ವ್ಯತ್ಯಾಸ ಅತಿ ದೊಡ್ಡದು. ಆದುದರಿಂದಲೇ ನನಗೆ ಬೇಸರ" ಎಂದು ಐಂದ್ರಿತಾ ವಿವರಿಸುತ್ತಾರೆ.

೧೮-೧೯ ಸಿನೆಮಾಗಳನ್ನು ಮಾಡಿದ್ದರೂ ತಮ್ಮ ಸಂಭಾವನೆಯಲ್ಲಿ ಏರಿಕೆ ಮಾತ್ರ ಅತಿ ಕಡಿಮೆ ಎನ್ನುವ ಅವರು "ನಾನು ಹಲವಾರು ಸ್ಕ್ರಿಪ್ಟ್ ಗಳನ್ನು ಮೆಚ್ಚಿದೆ ಮತ್ತು ಸಿನೆಮಾದ ಭಾಗವಾಗಲು ಉತ್ಸಾಹ ಇತ್ತು ಆದರೆ ಸಂಭಾವನೆಗೆ ವಿಷಯಕ್ಕೆ ಬಂದಾಗ ಉತ್ತೇಜನ ಇಲ್ಲ" ಎನ್ನುತ್ತಾರೆ ನಟಿ.

ನಟಿ ಸದ್ಯಕ್ಕೆ ಇನ್ನೆರಡು ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರಂತೆ.

SCROLL FOR NEXT