'ರಾಮನ್ ರಾಘವ್ ೨.೦' ಭಿತ್ತಿಚಿತ್ರ 
ಸಿನಿಮಾ ಸುದ್ದಿ

ಕಾನ್ ಚಿತ್ರೋತ್ಸವದಲ್ಲಿ ನವಾಜುದ್ದೀನ್ ಸಿದ್ದಿಕೆಗೆ ಪ್ರಚಂಡ ಕರತಾಡನ

ಮುಂಬೈನ ನ ಸರಣಿ ಕೊಲೆಗಾರ ರಾಮನ್ ರಾಘವ ಜೀವನಾಧಾರಿತ ಚಿತ್ರ 'ರಾಮನ್ ರಾಘವ ೨.೦' ೬೯ನೇ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನಟ ನವಾಜುದ್ದೀನ್ ಸಿದ್ದಿಕಿ ಅವರ ನಟನೆ ಪ್ರೇಕ್ಷಕರ

ಕಾನ್: ಮುಂಬೈನ ನ ಸರಣಿ ಕೊಲೆಗಾರ ರಾಮನ್ ರಾಘವ ಜೀವನಾಧಾರಿತ ಚಿತ್ರ 'ರಾಮನ್ ರಾಘವ ೨.೦' ೬೯ನೇ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನಟ ನವಾಜುದ್ದೀನ್ ಸಿದ್ದಿಕಿ ಅವರ ನಟನೆ ಪ್ರೇಕ್ಷಕರ ಮನಸೂರೆಗೊಂಡಿದ್ದು, ಕರತಾಡನ ಪ್ರದರ್ಶಿಸಿ ನಟನನ್ನು ಅಭಿನಂದಿಸಿದ್ದಾರೆ.

'ಗ್ಯಾಂಗ್ಸ್ ಆಫ್ ವಸೀಪುರ್' ಖ್ಯಾತಿಯ ಅನುರಾಗ್ ಕಶ್ಯಪ್ ಈ ಸಿನೆಮಾವನ್ನು ನಿರ್ದೇಶಿಸಿದ್ದು, ಸರಣಿ ಕೊಲೆಗಾರನ ಪಾತ್ರದಲ್ಲಿ ನವಾಜುದ್ದೀನ್ ಕಾಣಿಸಿಕೊಂಡಿದ್ದರೆ, ವಿಕ್ಕಿ ಕೌಶಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರದರ್ಶನಕ್ಕೂ ಮುಂಚಿತವಾಗಿ ಟ್ವೀಟ್ ಮಾಡಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ "ಮೊದಲ ಪ್ರದರ್ಶನ ಶುರುವಾಗುವುದಿದೆ. ಚಿತ್ರಮಂದಿರ ಸಂಪೂರ್ಣ ತುಂಬಿದೆ" ಎಂದಿದ್ದರು.

ಕಾನ್ ಚಿತ್ರೋತ್ಸವದ ಸಿನೆಮಾಗಳ ವಿಮರ್ಶೆಗಳ ಅಂತರ್ಜಾಲ ತಾಣವಾದ ವೆರೈಟಿ.ಕಾಂ ನಲ್ಲಿ "ಕಶ್ಯಪ್ ಅವರ ನಿರ್ದೇಶನ ರೋಮಾಂಚನ ಮೂಡಿಸುವುದನ್ನು ಮುಂದುವರೆಸಿದೆ" ಎಂದು ರಾಮನ್ ರಾಘವ ೨.೦' ಬಗ್ಗೆ ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

SCROLL FOR NEXT