ತನ್ನ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗ ನಿದ್ದೆಗೆಡಿಸಿದ್ದ ಬಿಗ್ ಬಾಸ್ 7ನೇ ಆವೃತ್ತಿಯ ಸ್ಪರ್ಧಾಳು ಸೋಫಿಯಾ ಹಯಾತ್ ದಿಢೀರ್ ಅಂತ ಸನ್ಯಾಸಿನ ವೇಳೆ ಧರಿಸಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾಳೆ.
ಸೋಫಿಯಾ ಹಯಾತ್ ಳ ಈ ನಡೆ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ. 2014ರ ನವೆಂಬರ್ ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವೈಯಕ್ತಿಕ ಗರಿಷ್ಠ ಮೊತ್ತ 264 ರನ್ ಸಿಡಿಸಿದ್ದರು. ಈ ವೇಳೆ ಸೋಫಿಯಾ ರೋಹಿತ್ ಶರ್ಮಾಗೆ ತನ್ನ ನಗ್ನ ಚಿತ್ರಗಳನ್ನು ಕಳುಹಿಸಿ ಸುದ್ದಿಯಾಗಿದ್ದಳು. ಬಳಿಕ ತನ್ನ ಸಂಪೂರ್ಣ ನಗ್ನ ಚಿತ್ರವೊಂದನ್ನು ಟ್ವೀಟರ್ ನಲ್ಲಿ ಹರಿಬಿಟ್ಟು ತಮ್ಮ ಹಿಂಬಾಲಕರಿಗೆ ಔತಣ ಉಣಬಡಿಸುತ್ತಿದ್ದ ಆಕೆ ಇದೀಗ ಸನ್ಯಾಸಿನಿ ವೇಷ ಧರಿಸಿರುವ ಫೋಟೋವನ್ನು ಇನ್ ಸ್ಟ್ರಾಗಾಂ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ.
ತಮ್ಮ ಫೋಸ್ಟ್ ನಲ್ಲಿ ಸೋಫಿಯಾ, ಮದರ್ ಸೋಫಿಯಾ ಎಂದು ಕರೆದುಕೊಂಡಿದ್ದು, ನಕಲಿ ಜೀವನವನ್ನು ಬಿಟ್ಟು ಪೂರ್ಣತೆಯಿಂದ ನಾವೆಲ್ಲ ಬಾಳಬೇಕು ಎಂದು ಬರೆದುಕೊಂಡಿದ್ದಾರೆ. ನಾನು ಎಲ್ಲರಿಗೂ ತಾಯಿ ಇದ್ದಂತೆ. ಓಂ ಎಂದು ನಾನು ಕರೆದಾಗ ಭೂಮಿ ಸೃಷ್ಠಿಯಾಯಿತು ಎಂದು ಬರೆದುಕೊಂಡಿದ್ದಾರೆ.