ರಮ್ಯಾ 
ಸಿನಿಮಾ ಸುದ್ದಿ

120 ಅಡಿ ಉದ್ದದ ಹಾವಿನ ಪಾತ್ರದಲ್ಲಿ ನಟಿ ರಮ್ಯಾ

ಕೋಡಿ ರಾಮಕೃಷ್ಣ ನಿರ್ದೇಶನದ ನಾಗರ ಹಾವು ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ 120 ಅಡಿ ಹಾವಾಗಿ ಕಾಣಿಸಿಕೊಳ್ಳಲಿದ್ದಾರೆ...

ಬೆಂಗಳೂರು: ಕೋಡಿ ರಾಮಕೃಷ್ಣ ನಿರ್ದೇಶನದ ನಾಗರ ಹಾವು ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ 120 ಅಡಿ ಹಾವಾಗಿ ಕಾಣಿಸಿಕೊಳ್ಳಲಿದ್ದಾರೆ.

ದಿವಂಗತ ವಿಷ್ಣುವರ್ಧನ್ ಅವರನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಮತ್ತೆ  ತೆರೆಗೆ ತರುವ ಪ್ರಯತ್ನದಲ್ಲಿರುವ ಕೋಡಿ ರಾಮಕೃಷ್ಣ ಚಿತ್ರದ ಪ್ರಮೋಷನ್ ಗಾಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ.

ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ನೀಡದ ನಿರ್ದೇಶಕರು, 140 ಅಡಿ ಹಾವಿನ ಪಾತ್ರದಲ್ಲಿ ದಿವಂಗತ ವಿಷ್ಣುವರ್ಧನ್ ಮತ್ತು 120 ಅಡಿ ಹಾವಿನ ಅವತಾರದಲ್ಲಿ ನಟಿ ರಮ್ಯಾ ಕಾಣಿಸಿಕೊಳ್ಳುವುದೇ ಚಿತ್ರದ ಹೈಲೈಟ್ಸ್ ಎಂದು ಹೇಳಿದ್ದಾರೆ.

ನಾಗರಹಾವು ಸಿನಿಮಾದಲ್ಲಿನ ರಮ್ಯಾ ಅವರ ತ್ರಿಡಿ ಪೋಸ್ಟರ್ ಗಳು ಎಲ್ಲರ ಗಮನ ಸೆಳೆದಿವೆ. ಜರ್ಮನಿಯ ಡಸೆಲ್ಡೋರ್ಫ್ ನಲ್ಲಿ ನಡೆದ ವಿಶ್ವದ ದೊಡ್ಡ ಮುದ್ರಣ ಉಪಕರಣ ಪ್ರದರ್ಶನದಲ್ಲಿ ಲೆಂಕ್ಟಿಕುಲರ್ ಮುದ್ರಣ ಪ್ರಶಸ್ತಿಗಾಗಿ ನಾಮನಿರ್ದೇಶನ ಗೊಂಡಿದ್ದ ದ್ರುಪ ಈ ತ್ರಿಡಿ ಪೋಸ್ಟರ್ ರೂಪಿಸಿದ್ದಾರೆ.

ಇನ್ನು ನಿಂತಿರುವ ಭಂಗಿಯಲ್ಲಿರುವ ದಿ.ವಿಷ್ಣುವರ್ಧನ್ ಅವರ 50 ಅಡಿ ಕಟೌಟ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ಮೇ 30 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿರುವ ಚಿತ್ರತಂಡ ಅದಕ್ಕಾಗಿ ಅದ್ಧೂರಿ ತಯಾರಿ ನಡೆಸಿದೆ.

ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿರುವ ರಮ್ಯಾ ಮತ್ತು ದಿಗಂತ್ ಕೂಡ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯುನ್ನತ ಮಟ್ಟದ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!