ಚೆನ್ನೈ: ತೆಲುಗಿನ ಬ್ಲಾಕ್ ಬಸ್ಟರ್ ಸೊಗ್ಗಾಡೆ ಚಿನ್ನಿ ನಯನ ಚಿತ್ರವನ್ನು ನಟ ಉಪೇಂದ್ರ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ.
ಚಿತ್ರದ ರಿಮೇಕ್ ಹಕ್ಕನ್ನು ಖರೀದಿಸಿರುವ ಉಪೇಂದ್ರ ಶೀಘ್ರವೇ ಚಿತ್ರೀಕರಣ ಆರಂಭಿಸಲಿದ್ದಾರೆ. ನಟನೆ ಜೊತೆಗೆ ಚಿತ್ರವನ್ನು ಅವರೇ ನಿರ್ದೇಶಿಸಲು ಉಪೇಂದ್ರ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ಕಲ್ಯಾಣ ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಲಾವಣ್ಯ ತ್ರಿಪಾಠಿ ಮತ್ತು ರಮ್ಯಾ ಕೃಷ್ಣ ಅಭಿನಯಿಸಿದ್ದರು. ಸೊಗ್ಗಾಡೆ ಚಿನ್ನಿ ನಯನ 75 ಕೋಟಿ ಲಾಭವಾಗಿದ್ದು, ಕಲ್ಯಾಣ ಕೃಷ್ಣ ಮತ್ತು ನಾಗಾರ್ಜನ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ ತಯಾರಿಯಲ್ಲಿ ತೊಡಗಿದ್ದಾರೆ. ನಾಗಾರ್ಜುನ ದೆವ್ವದ ಪಾತ್ರದಲ್ಲಿ ಅಭಿನಯಿಸಲಿದ್ದು, ಇದೊಂದು ಹಾರರ್ ಸಿನಿಮಾ ಆಗಿದೆ.