'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಶೃತಿ ಹರಿಹರನ್ ಮತ್ತು ಅನಂತನಾಗ್ 
ಸಿನಿಮಾ ಸುದ್ದಿ

'ಗೋಧಿ ಬಣ್ಣ ..' ಮುಂದಿನ ವಾರ; ಮೋಡಿ ಮಾಡುವ ಕಾತರದಲ್ಲಿ ಅನಂತ್-ಹೇಮಂತ್ ಜೋಡಿ

ಬಹು ನಿರೀಕ್ಷಿತ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಮೂಲಕ ಪಾದಾರ್ಪಣೆ ಮಾಡುತ್ತಿರುವ ಹೇಮಂತ್ ಎಂ ರಾವ್ ತಮ್ಮ ಗುರಿಯ ಬಗ್ಗೆ ಚಿತ್ತ ನೆಟ್ಟ ಯುವಕ. ತಮ್ಮ ಎಂಜಿನಿಯರಿಂಗ್ ವೃತ್ತಿ

ಬೆಂಗಳೂರು: ಬಹು ನಿರೀಕ್ಷಿತ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಮೂಲಕ ಪಾದಾರ್ಪಣೆ ಮಾಡುತ್ತಿರುವ ಹೇಮಂತ್ ಎಂ ರಾವ್ ತಮ್ಮ ಗುರಿಯ ಬಗ್ಗೆ ಚಿತ್ತ ನೆಟ್ಟ ಯುವಕ. ತಮ್ಮ ಎಂಜಿನಿಯರಿಂಗ್ ವೃತ್ತಿ ತೊರೆದು ಸಿನೆಮಾ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹೇಮಂತ್ ತಮ್ಮ ಸಿನೆಮಾದ ಬಿಡುಗಡೆಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

"ಈ ಪಯಣ ಸುದೀರ್ಘವಾದದ್ದು ಆದರೆ ಆನಂದಮಯವಾಗಿತ್ತು. ಆದರೆ ನನಗೆ ಇದ್ದ ಸ್ಪಷ್ಟತೆ ನನ್ನ ದೊಡ್ಡ ಶಕ್ತಿ. ಅಲ್ಲದೆ ನನಗೆ ಒಳ್ಳೆಯ ನಿರ್ಮಾಪಕ ಸಿಕ್ಕಿದ್ದರು. ಪುಷ್ಕರ್ ಮಲ್ಲಿಕಾರ್ಜುನಯ್ಯ ನನಗೆ ಎಂದಿಗೂ ಬೆಂಬಲ ನೀಡಿದರು" ಎನ್ನುತ್ತಾರೆ ಚೊಚ್ಚಲ ನಿರ್ದೇಶಕ. "ನಾನು ಈ ಹಿಂದೆ ಗಿರೀಶ್ ಕಾಸರವಳ್ಳಿ ಮತ್ತು ಜಾಕೋಬ್ ವರ್ಗೀಸ್ ಅವರೊಂದಿಗೆ ಕೆಲಸ ಮಾಡಿದ ಅನುಭವವಿದ್ದು, ಅದು ಸಿನೆಮಾ ಶಾಲೆಯಲ್ಲಿ ಕಲಿತಂತೆ" ಎನ್ನುತ್ತಾರೆ.

ಸಿನೆಮಾದ ಬಗ್ಗೆ ಮಾತನಾಡುವ ಹೇಮಂತ್ ಇದು ಆಲ್ಜೈಮರ್ ರೋಗ ಮತ್ತು ಕಾಣೆಯಾದ ವ್ಯಕ್ತಿಯ ಬಗೆಗಿನ ಸಿನೆಮಾ "ನಾನು ಕಾಣೆಯಾದವರ ಬಗ್ಗೆ ಚಿಂತಿಸುತ್ತಿದ್ದಾಗ ನನಗೆ ಮೊದಲು ಹೊಳೆದದ್ದು ಇದರ ಬಗ್ಗೆ ದೂರದರ್ಶನದಲ್ಲಿ ಮೂಡುತ್ತಿದ್ದ ಪ್ರಕಟಣೆಗಳು. ಅದರಲ್ಲಿ ಗೋಧಿ ಬಣ್ಣ ಸಾಮಾನ್ಯವಾಗಿ ಮೂಡಿ ಬರುತ್ತಿದ್ದ ಪದಗಳು. ನಮ್ಮ ಶೀರ್ಷಿಕೆಗೆ ಸರಿಯಾಗಿ ಹೊಂದಿಕೊಂಡಿತು" ಎನ್ನುತ್ತಾರೆ.

"ನಾನು ಕಾಣೆಯಾದವರ ಬಗ್ಗೆ ಸಿನೆಮಾಗಾಗಿ ಅಧ್ಯಯನ ನಡೆಸಿದಾಗ ತಿಳಿದುಬಂದದ್ದು, ದಿನಕ್ಕೆ ೫೦ಕ್ಕಿಂತಲೂ ಹೆಚ್ಚು ಜನ ಕಾಣೆಯಾಗುತ್ತರೆ ಮತ್ತು ಅವರಲ್ಲಿ ಬಹುತೇಕರು ಹಿರಿ ವಯಸ್ಕರು ಮತ್ತು ಮಕ್ಕಳು. ಅವರ ಕುಟುಂಬದವರು ಗೋಡೆಗಳ ಮೇಲೆ ಕಾಣೆಯಾದವರ ಭಿತ್ತಿಚಿತ್ರಗಳನ್ನು ಅಂಟಿಸಿರುತ್ತಾರೆ. ಅಂತಹ ಕುಟುಂಬಗಳನ್ನು ಭೇಟಿ ಮಾಡಿದೆ. ಅಲ್ಲದೆ ಆಲ್ಜೈಮರ್ಸ್ ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರನ್ನು ಬೇಟಿ ಮಾಡಿದೆ" ಎನ್ನುತ್ತಾರೆ ಹೇಮಂತ್.

"ಇದು ಕಾಣೆಯಾದರವ ಬಗ್ಗೆಯಷ್ಟೇ ಅಲ್ಲ, ಇದಕ್ಕೆ ಒಂದು ಕ್ರೈಮ್ ಕೋನವು ಇದೆ" ಎನ್ನುತ್ತಾರೆ ಹೇಮಂತ್.

ಈ ಸ್ಕ್ರಿಪ್ಟ್ ಬರೆಯುವಾಗ ಅನಂತ್ ನಾಗ್ ಅವರು ತಲೆಯಲ್ಲಿದ್ದರು ಎನ್ನುವ ಅವರು "ಆದರೆ ಅವರು ಒಪುತ್ತಾರೆ ಎಂಬ ಭರವಸೆ ಮೊದಲಿಗೆ ಇರಲಿಲ್ಲ. ನಾನವರ ದೊಡ್ಡ ಅಭಿಮಾನಿ ಮತ್ತು ಅವರ ಎಲ್ಲ ಸಿನೆಮಾಗಳನ್ನು ನೋಡುತ್ತಾ ಬಂದಿದ್ದೇನೆ" ಎನ್ನುತ್ತಾರೆ.

ಈ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶೃತಿ ಹರಿಹರನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಗೆರಿಲ್ಲಾ ಮಾದರಿಯ ಸಿನೆಮಾ ಚಿತ್ರೀಕರಣದ ಬಗ್ಗೆ ಒಲವಿದ್ದ ಹೇಮಂತ್ "ನಗರದ ಸುತ್ತಮುತ್ತ ಜನಭರಿತ ಪ್ರದೇಶಗಳಿಗೆ ನಟರನ್ನು ಕರೆದೊಯ್ಯುತ್ತಿದ್ದೆವು. ಅವೆನ್ಯೂ ರಸ್ತೆಯಲ್ಲಿ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ರವರೆಗೆ ಚಿತ್ರೀಕರಣ ನಡೆಸಿದೆವು, ಆದರೆ ಅದು ಯಾರಿಗೂ ತಿಳಿಯಲಿಲ್ಲ" ಎನ್ನುತ್ತಾರೆ ಉತ್ಸಾಹಿ ನಿರ್ದೇಶಕ.

ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದು, ನಂದ ಕಿಶೋರ್ ನೀಲಕಂಠ ರಾವ್ ಸಿನೆಮ್ಯಾಟೋಗ್ರಾಫರ್. ಸದಾ ಅತ್ಯುತ್ತಮವಾದದ್ದನ್ನೇ ಸೃಷ್ಟಿಸುವ ಮನಸುಳ್ಳ ಹೇಮಂತ್ "ನನಗೆ ಎರಡು ಮೂರು ಚಿತ್ರಗಳನ್ನು ಮಾಡಲಾದರೂ ಸಂತಸವಾಗಿರುತ್ತೇನೆ. 'ಗೋಧಿ ಬಣ್ಣ ಸಾಧಾರಣ..' ಮೂಲಕ ಚಿತ್ರರಂಗಕ್ಕೆ ನನ್ನ ಆಗಮನವನ್ನು ಘೋಷಿಸಲು ಇಷ್ಟ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT