ಮುಂಬೈ: ಕುಷ್ಟರೋಗ, ಟ್ಯೂಬರ್ ಕ್ಯುಲೋಸಿಸ್ ಮತ್ತಿತರ ಮಾರಕ ರೋಗಗಳ ವಿರುದ್ಧ ಹೋರಾಡುತ್ತಿರುವ ಲೆಪ್ರಾ ಭಾರತ ಸಂಸ್ಥೆಗೆ ಸದ್ಭಾವನಾ ರಾಯಭಾರಿಯಾಗಿರುವುದಕ್ಕೆ ನಟ ಆರ್ ಮಾಧವನ್ ಸಂತಸ ವ್ಯಕ್ತಪಡಿಸಿದ್ದಾರೆ.
"ಕುಷ್ಟರೋಗದಿಂದ ಗುಣಮುಖರಾಗಬಹುದು, ಯಾರೂ ಅದರ ಜೊತೆಗೆ ಬದುಕಬೇಕಾಗಿಲ್ಲ ಎಂದು ಪ್ರಚಾರ ಮಾಡಲು ಲೆಪ್ರಾ ಭಾರತದ ಸದ್ಭಾವನಾ ರಾಯಭಾರಿಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ" ಎಂದು ಸೋಮವಾರ ಮಾಧವನ್ ಟ್ವೀಟ್ ಮಾಡಿದ್ದಾರೆ.
ಕುಷ್ಟರೋಗ, ಟ್ಯೂಬರ್ ಕ್ಯುಲೋಸಿಸ್, ಮಲೇರಿಯಾ, ಎಚ್ ಐ ವಿ/ಏಡ್ಸ್ ರೋಗಗಳ ವಿರುದ್ಧ ಸಾಮಾಜಿಕ ಆರೋಗ್ಯದೆಡೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆ ಲೆಪ್ರಾ.
'ತನು ವೆಡ್ಸ್ ಮನು ರೆಟರ್ನ್ಸ್' ನಟ, ಸುಧಾ ಕೊಂಗಾರ ಅವರ ೨೦೧೬ರ ಬಿಡುಗಡೆ 'ಸಲಾ ಖಡೂಸ್'ನಲ್ಲಿ ಕಾಣಿಸಿಕೊಂಡಿದ್ದರು.