'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಅನಂತ ನಾಗ್ ಮತ್ತು ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾವನ್ನು ತಮ್ಮ ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ

'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ, 'ವಾಸ್ತು ಪ್ರಕಾರ', 'ರಿಕ್ಕಿ' ಸಿನೆಮಾಗಳ ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ರಕ್ಷಿತ್ ಶೆಟ್ಟಿ ಮತ್ತೊಂದು ಮಹತ್ವದ ಬಿಡುಗಡೆಯ

ಬೆಂಗಳೂರು: 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ, 'ವಾಸ್ತು ಪ್ರಕಾರ', 'ರಿಕ್ಕಿ' ಸಿನೆಮಾಗಳ ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ರಕ್ಷಿತ್ ಶೆಟ್ಟಿ ಮತ್ತೊಂದು ಮಹತ್ವದ ಬಿಡುಗಡೆಯ ಕಾತರದಲ್ಲಿದ್ದಾರೆ.

ಒಳ್ಳೆಯ ಸ್ಕ್ರಿಪ್ಟ್ ಗಳ ಆಯ್ಕೆಯಲ್ಲಿ ಎಂದಿಗೂ ಎಚ್ಚರದಿಂದಿರುವ ನಟ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ನಟಿಸಿರುವುದಕ್ಕೆ ಥ್ರಿಲ್ ಆಗಿದ್ದಾರೆ.

ಈ ಸಿನೆಮಾ ಪ್ರೇಕ್ಷಕರ ಇಡೀ ಕುಟುಂಬವನ್ನು ಸಿನೆಮಾ ಮಂದಿರಕ್ಕೆ ಎಳೆದು ತರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ರಕ್ಷಿತ್ "ನನಗೆ ಹೊಸ ಪ್ರೇಕ್ಷಕರನ್ನು ಸೃಷ್ಟಿಸಲು ಇಷ್ಟ. ಪ್ರತಿ ಸಿನೆಮಾದೊಂದಿಗೆ ಕನ್ನಡ ಸಿನೆಮಾಗಳನ್ನು ನೋಡಬಿಟ್ಟಿರುವ ಪ್ರೇಕ್ಷಕನನ್ನು ಮತ್ತೆ ಕರೆತರಲು ಬಯಸುತ್ತೇನೆ. 'ಗೋಧಿ ಬಣ್ಣ...' ಕೂಡ ಅಂತಹ ಒಂದು ಸಿನೆಮಾ, ಏಕೆಂದರೆ ಇದು ಕೌಟುಂಬಿಕ ಸಂಬಂಧಗಳ ಬಗ್ಗೆ ಮಾತನಾಡುತ್ತದೆ. ಕಮರ್ಷಿಯಲ್ ಸಿನೆಮಾಗಳಿಂದ ಹೊಸ ಪೀಳೆಗೆಯ ಸಿನೆಮಾಗಳನ್ನು ಪ್ರಯತ್ನಿಸಿರುವ ನನ್ನನ್ನು ಈ ಹೊಸ ಪ್ರಯತ್ನ ಭಾಗವಾಗಿರುವುದಕ್ಕೂ ಜನ ಒಪ್ಪಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ" ಎನ್ನುತ್ತಾರೆ ನಟ.

ಆಲ್ಜೈಮರ್ ಖಾಯಿಲೆಯಿರುವ ಅನಂತನಾಗ್ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ "ಸಾಮಾನ್ಯವಾಗಿ ತಮ್ಮ ತಾಯಂದಿರೊಂದಿಗೆ ಗಂಡುಮಕ್ಕಳು ಮುಕ್ತ ಭಾವನೆಗಳೊಂಗಿದೆ ವ್ಯವಹರಿಸುತ್ತಾರೆ. ನನ್ನ ವಿಷಯದಲ್ಲೂ ಹಾಗೆಯೇ. ನನ್ನ ತಂದೆಯನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದೇ ಇಲ್ಲ" ಎನ್ನುವ ರಕ್ಷಿತ್ ಈ ಸಿನೆಮಾವನ್ನು ಅವರ ತಂದೆಗೆ ಅರ್ಪಿಸುತ್ತಿರುವುದಾಗಿ ತಿಳಿಸುತ್ತಾರೆ. "ಅವರಿಗೆ ನೇರವಾಗಿ ಹೇಳಲು ಸಾಧ್ಯವಿಲ್ಲದೇ ಹೋದರೂ ಈ ಚಿತ್ರದ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಲಿದ್ದೇನೆ" ಎನ್ನುತ್ತಾರೆ.

ತಮ್ಮ ವೃತ್ತಿಜೀವನ ರೂಪುಗೊಳ್ಳುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುವ ರಕ್ಷಿತ್ "೨೦ ವರ್ಷದ ನಂತರ ಹಿಂತಿರುಗಿ ನೋಡಿದಾಗ, ನನ್ನ ಕೆಲಸದ ಬಗ್ಗೆ ಹೆಮ್ಮೆಯಿರಬೇಕು" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT