ಮುಂಬೈ: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಬ್ಬ ಬುದ್ಧಿಗೇಡಿ ರಾಜಕಾರಣಿಯಾಗಿದ್ದು, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಟೀಕಿಸಿದ್ದಾರೆ.
ಮುಂಬಯಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸನ್ನಿ ಲಿಯೋನ್ ಟ್ರಂಪ್ ಅವರ ನಡೆ-ನುಡಿ ಭಿನ್ನವಾಗಿದೆ. ಸದಾ ವಿವಾದ ಪ್ರಿಯರಾದ ಅವರ ಅಭಿಪ್ರಾಯಗಳಿಗೆ ನನ್ನ ಸಮ್ಮತಿಯಿಲ್ಲ. ಯಾವುದೇ ಒಂದು ವಿಷಯದಲ್ಲಿ ಅವರು ಗಟ್ಟಿ ನಿಲುವು ತಾಳದೆ ಇರುವುದರಿಂದ ಅವರ ವಿಷಯದಲ್ಲಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಟ್ರಂಪ್ ವಿಚಾರವಾಗಿ ನೀವು ಪ್ರೀತಿ ಅಥವಾ ದ್ವೇಷವನ್ನು ತಾಳುವ ಮೊದಲು ಅವರ ಭಾಷಣ ತುಣುಕಿನ ವಿಡಿಯೋಗಳನ್ನು ವೀಕ್ಷಿಸಿದರೆ ಉತ್ತಮ ಎಂದು ಸನ್ನಿ ಲಿಯೋನ್ ಅಭಿಪ್ರಾಯಪಟ್ಟಿದ್ದಾರೆ.