ಸಿನಿಮಾ ಸುದ್ದಿ

ಮಾಧ್ಯಮ ಸವಾಲು ಸುಖಾಂತ್ಯ: ನನ್ನ ಮದುವೆ ಬಗ್ಗೆ ಗಮನ ಹರಿಸುವೆ: ಯಶ್

Shilpa D

ಬೆಂಗಳೂರು: ಮಾಧ್ಯಮಗಳ ಜೊತೆ ಸಂವಾದ ನಡೆಸುತ್ತೇನೆ ಎಂದು ಕಳೆದ ನಾಲ್ಕು ವಾರಗಳಿಂದ ಹೇಳಿಕೊಂಡು ಬರುತ್ತಲೇ ಇದ್ದ ಯಶ್‌ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಚಾನೆಲ್ ಗಳಿಗೂ ಹೋಗುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.

ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಯಶಸ್ಸಿನ ಸಡಗರದಲ್ಲಿರುವ ನಟ ಯಶ್ ಪ್ರೇಕ್ಷಕರು ಸಿನಿಮಾವನ್ನು ಸ್ವೀಕರಿಸಿದ ರೀತಿ ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ, ಸಂತು....
ಸಿನಿಮಾ ಬಿಡುಗಡೆ ಮಾಡುವಾಗ ಅಗತ್ಯ ಪ್ರಮಾಣದ ಥಿಯೇಟರ್ ಸಿಕ್ಕಿಲ್ಲ, ಆದರೂ ಸಿನಿಮಾ ಕಲೆಕ್ಷನ್ ಜೋರಾಗಿದೆ ಎಂದು ಹೇಳಿದ್ದಾರೆ.

ಕೆಜಿಎಫ್ ಚಿತ್ರದ ಶೂಟಿಂಗ್ 2017 ಜನವರಿಯಲ್ಲಿ ಆರಂಭವಾಗಲಿದೆ.ಅಲ್ಲಿಯವರೆಗೂ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿರುವ ಯಶ್ ಮದುವೆ ಸಿದ್ಧತೆಗಳ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಡಿಸೆಂಬರ್ 10 ಮತ್ತು 11 ರಂದು ಮದುವೆಯ ಡೇಟ್ ಫಿಕ್ಸ್ ಆಗಿದ್ದು.ಈಗ ಪೋಷಕರು ಮಾತು ಕೇಳುವ ಸಮಯವಾಗಿದೆ. ಒಂದು ವೇಳೆ ನಾನು ಪೋಷಕರ ಮಾತನ್ನು ಕೇಳದಿದ್ದರೇ ಮನೆಯಿಂದ ಒದ್ದು ಹೊರಹಾಕುತ್ತಾರೆ ಎಂದು ಯಶ್ ತಮಾಷೆ ಮಾಡಿದ್ದಾರೆ.

ನನ್ನ ಬ್ಯುಸಿ ಷೆಡ್ಯೂಲ್ ಗೆ ಪೋಷಕರು ಕಂಗಲಾಗಿದ್ದಾರೆ, ಮದುವೆಯ ಬಗ್ಗೆ ಗಮನ ಹರಿಸುವುದು ಅವರ ಇಚ್ಚೆಯಾಗಿದೆ. ನನ್ನ ಮದುವೆಗಾಗಿ ನಾನೊಂದು ಚಿಕ್ಕ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂದು ಯಶ್ ತಿಳಿಸಿದ್ದಾರೆ.

ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಯಶ್, ಪ್ರೇಕ್ಷಕರ ಅಭಿಮಾನದಿಂದ ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸು ದೊರೆತಿದೆ ಎಂದು ತಿಳಿಸಿದ್ದಾರೆ.

ನನಗೆ ಕಮರ್ಷಿಯಲ್ ಚಿತ್ರಗಳು ಎಂದರೆ ತುಂಬಾ ಪ್ರೀತಿ, ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುವುದು ನನಗೆ ತುಂಬಾ ಇಷ್ಟ. ನನ್ ಸಿನಿಮಾಗಳಳ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಸಂದೇಶವಿರುತ್ತದೆ,  ರೋಮ್ಯಾಂಟಿಕ್ ಮತ್ತು ಹಾಸ್ಯದಲ್ಲಿ ಅವುಗಳನ್ನು ತೆರೆ ಮೇಲೆ ತರಲಾಗುತ್ತದೆ ಎಂಂದು ಹೇಳಿದ್ದಾರೆ.

SCROLL FOR NEXT