ಬೆಂಗಳೂರು: 'ಮುಕುಂದ ಮುರಾರಿ' ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ನಂದ ಕಿಶೋರ್, ಈಗ ಅವರ ಮುಂದಿನ ಸಿನೆಮಾ 'ಟೈಗರ್' ಆಡಿಯೋ ಬಿಡುಗಡೆಗೆ ಸಜ್ಜಾಗಿದ್ದಾರೆ.
'ಹೆಬ್ಬುಲಿ', 'ಚಕ್ರವ್ಯೂಹ', 'ದ ವಿಲನ್' ಇಂತಹ ಸ್ಟಾರ್ ನಟರ ಸಿನೆಮಾಗಳಿಗೆ ಸಂಗೀತ ನೀಡುವಲ್ಲಿ ಕಾರ್ಯನಿರತವಾಗಿರುವ ಅರ್ಜುನ್ ಜನ್ಯ, ಈಗ 'ಟೈಗರ್' ಸಂಗೀತವನ್ನು ಮಾಡಿ ಮುಗಿಸಿದ್ದಾರೆ.
ಈ ಆಡಿಯೋ ಆಲ್ಬಮ್ ನಲ್ಲಿ ಆರು ಹಾಡುಗಳಿದ್ದು, ಪರಿಚಯಾತ್ಮಕ ಹಾಡನ್ನು ನಟ ಸುದೀಪ್ ಹಾಡಿದ್ದಾರೆ. ವಿಜಯ್ ಪ್ರಕಾಶ್, ಸೋನು ನಿಗಮ್ ಕೂಡ ಹಾಡಿದ್ದಾರೆ.
ಹಾಗೆಯೇ ಖ್ಯಾತ ಗಾಯಕಿ ಬಿ ಕೆ ಸುಮಿತ್ರಾ ಅವರ ಪುತ್ರ ನಟ ಸುನಿಲ್ ರಾವ್ ಕೂಡ ಈ ಆಲ್ಬಂ ನಲ್ಲಿ ಒಂದು ಹಾಡನ್ನು ಹಾಡಿರುವುದು ವಿಶೇಷ.