ಜೀವಮಾನ ಸಾಧನೆಗಾಗಿ ಗೌರವ ಆಸ್ಕರ್ ಪಡೆದ ನಟ ಜಾಕಿ ಚಾನ್
ಲಾಸೆಂಜಲಿಸ್: ೨೩ ವರ್ಷಗಳ ಹಿಂದೆ ಸಿಲ್ವೆಸ್ಟರ್ ಸ್ಟಲ್ಲೋನ್ ಹೌಸ್ ನಲ್ಲಿ ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಾಕಿ ಚಾನ್, ತಾವು ಕೂಡ ಅದನ್ನು ಪಡೆಯಬೇಕೆಂದು ನಿಶ್ಚಯಿಸಿದ್ದು ಆವಾಗಲೇ!
ಶನಿವಾರ ನಡೆದ ವಾರ್ಷಿಕ ಗವರ್ನರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚೈನಾದ ನಟ ಮತ್ತು ಮಾರ್ಷಿಯಲ್ ಕಲಾವಿದ ಜಾಕಿ ಚಾನ್ ಅವರಿಗೆ ಕೊನೆಗೂ ಅವರ ದಶಕಗಳ ಸಿನೆಮಾ ಕೆಲಸವನ್ನು ಗುರುತಿಸಿ, ಗೌರವ ಆಸ್ಕರ್ ಪ್ರಶಸ್ತಿ ನೀಡಲಾಗಿದೆ.
"ಸಿನೆಮಾ ರಂಗದಲ್ಲಿ ೫೬ ವರ್ಷಗಳನ್ನು ಕಳೆದು, ೨೦೦ ಕ್ಕೂ ಹೆಚ್ಚು ಸಿನೆಮಾಗಳನ್ನು ಮಾಡಿದ ಮೇಲೆ ಕೊನೆಗೂ "ಎಂದು ೬೨ ವರ್ಷದ ಚಾನ್ ಚಿನ್ನದ ಪ್ರತಿಮೆಯ ಪ್ರಶಸ್ತಿ ಹಿಡಿದು ಹೇಳಿದ್ದಾರೆ.
ತಮ್ಮ ಮೂಲ ಸ್ಥಳ ಹಾಂಕಾಂಗ್ ಬಗ್ಗೆಯೂ ಪ್ರಶಂಸೆಯನ್ನು ಹರಿಸಿರುವ ಅವರು "ತಾವು ಹೆಮ್ಮೆಯ ಚೈನೀಸ್" ಎಂದು ಹೇಳಿಕೊಂಡಿದ್ದು ತಾವು ಇನ್ನು ಈ ರಂಗದಲ್ಲಿ ಉಳಿದಿರುವುದಕ್ಕೆ ಅಭಿಮಾನಿಗಳೇ ಕಾರಣ "ಮತ್ತು ನಾನು ಸಿನೆಮಾಗಳ್ಲಲಿ ನಟಿಸುವುದನ್ನು ಮುಂದುವರೆಸುತ್ತೇನೆ, ಕಿಟಕಿಗಳಿಂದ ನೆಗೆಯುವುದು, ಒದೆಯುವುದು, ಪಂಚ್ ಮಾಡುವುದು, ಮೂಳೆ ಮುರಿಯುವುದು ಮುಂದುವರೆಯುತ್ತದೆ" ಎಂದು ನಟ ಹೇಳಿದ್ದಾರೆ.
ವಾರ್ಷಿಕ ಸಮಾರಂಭ ಏರ್ಪಡಿಸುವ ದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಇದೆ ಸಮಯದಲ್ಲಿ ಬ್ರಿಟಿಷ್ ಸಿನೆಮಾ ಸಂಕಲನಕಾರ ಆನ್ ವಿ ಕೋಟ್ಸ್, ಕ್ಯಾಸ್ಟಿಂಗ್ ನಿರ್ದೇಶಕ ಲಿನ್ ಸ್ಟಾಲ್ ಮಾಸ್ಟರ್ ಮತ್ತು ಸಾಕ್ಷಚಿತ್ರ ನಿರ್ದೇಶಕ ಫೆಡ್ರಿಕ್ ವೈಸ್ ಮ್ಯಾನ್ ಅವರಿಗೂ ಗೌರವ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ.