ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುದರಲ್ಲಿ ನಟ ಧನಂಜಯ್ ಸಿದ್ಧಹಸ್ತರು. ಅದೇ ರೀತಿ ಅವರು ಮಾಡಿರುವ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತಿದೆ ಬದ್ಮಾಶ್ ಚಿತ್ರ.
ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿರುವ ಧನಂಜಯ್ ಅಭಿನಯದ ಆರು ಚಿತ್ರಗಳು ತೆರೆಕಂಡಿವೆ. ಅವರ ಒಂದೊಂದು ಚಿತ್ರವೂ ಒಂದು ವಿಭಿನ್ನ ರೀತಿಯ ಮಾನದಂಡಗಳನ್ನು ಹೊಂದಿದೆ. ಪಾತ್ರಗಳ ಆಯ್ಕೆಯಲ್ಲಿ ಧನಂಜಯ್ ಸ್ವತಂತ್ರರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಸ್ವತಃ ಧನಂಜಯ್ ಚಿತ್ರದ ಬಗ್ಗೆ ಮಾತನಾಡಿದ್ದು ಬದ್ಮಾಶ್ ಚಿತ್ರ ರಾಜಕೀಯದ ಪ್ರತಿಬಿಂಬ ಎಂದು ಹೇಳಿದ್ದಾರೆ. ಬದ್ಮಾಶ್ ಚಿತ್ರ ಸಾಮಾನ್ಯ ಪ್ರಜೆ ಹಾಗೂ ರಾಜಕೀಯದ ನಡುವಿನ ಮುಖವನ್ನು ಪರಿಶೋಧಿಸುತ್ತದೆ. ಸಾಮಾನ್ಯ ಪ್ರಜೆಯೊಬ್ಬ ಬದ್ಮಾಶ್ ಆಗಿ ಬದಲಾದಾಗ ಎನೆಲ್ಲಾ ಆಗುತ್ತದೆ ಎಂಬುದು ಚಿತ್ರ ತೆರೆದಿಡುತ್ತದೆ ಎಂದರು.
ಪಾತ್ರ ಆಯ್ಕೆ ಹೇಗೆ ಮಾಡುತ್ತೀರಾ? ನಾಯಕನಟನಾಗಿ ಚಿತ್ರರಂಗಕ್ಕೆ ಬರುವ ಮುನ್ನ ನಿರ್ದೇಶಕ ಗುರುಪ್ರಸಾದ್ ಅವರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದೆ. ಅಲ್ಲದೆ ಅನಿಮೇಶನ್ ಚಿತ್ರಗಳಿಗೆ ಹಿನ್ನಲೆ ಧ್ವನಿ ನೀಡುತ್ತಿದ್ದೆ. ಹೀಗೆ ನನ್ನ ಚಿತ್ರರಂಗ ಬದುಕು ಪ್ರಾರಂಭವಾಗಿತ್ತು ಎಂದರು.
ಡೈರೆಕ್ಟರ್ ಸ್ಪೆಷಲ್ ಚಿತ್ರ ನನ್ನಗೆ ಹೆಚ್ಚು ಮನ್ನಣೆ ತಂದುಕೊಟ್ಟಿತು. ಬಿಡುಗಡೆಗೂ ಮುನ್ನ ನಾಯಕನ ಕುರಿತಾಗಿ ಜನತೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆ ಚಿತ್ರದ ನಂತರ ಕೆಲವು ಚಿತ್ರಗಳನ್ನು ಮಾಡಿದೆ. ಆದರೆ ಡೈರೆಕ್ಟರ್ ಸ್ಪೆಷನ್ ಚಿತ್ರ ಕೆರಳಿಸಿದಂತ ಕುತೂಹಲ ಕೆರಳಿಸಲು ಸಾಧ್ಯವಾಗಿಲ್ಲ. ಆದರೆ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ ಎಂದರು.
ಬದ್ಮಾಶ್ ಚಿತ್ರದ ಕುರಿತಾಗಿ ಧನಂಜಯ್ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನನ್ನ ಇತರ ಚಿತ್ರಗಳ ಕುರಿತಾಗಿ ಮಾತನಾಡಿದರೂ ಪ್ರೇಕ್ಷಕರು ಮಾತ್ರ ಡೈರೆಕ್ಟರ್ ಸ್ಪೆಷಲ್, ಜಯನಗರ 5ನೇ ಬ್ಲಾಕ್ ಚಿತ್ರದ ಕುರಿತಾಗಿ ಮಾತನಾಡುತ್ತಾರೆ. ಈ ಇಮೇಜ್ ಬದ್ಮಾಶ್ ಚಿತ್ರದ ನಂತರ ಬದಲಾಗಲಿದೆ ಎಂದರು.