ಚೆನ್ನೈ: ತಮಿಳು ಭಾಷೆಯ ಸೂಪರ್ ಸ್ಟಾರ್ ವಿಜಯ್ ಅವರ ಇನ್ನಷ್ಟೇ ತೆರೆಕಾಣಬೇಕಿರುವ ’ಭೈರವ’ ಚಿತ್ರ ಸಾಮಾಜಿಕ ಜಾಲತಾಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಚಿತ್ರದ ಟೀಸರ್ ನ್ನು ಬರೊಬ್ಬರಿ 10 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ 10 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿರುವ ವಿಜಯ್ ನಟನೆಯ ಮೂರನೇ ಚಿತ್ರ ಇದಾಗಿದ್ದು, ಕಾಲಿವುಡ್ ನಟನ ಸತತ ಮೂರು ಚಿತ್ರಗಳ ಟೀಸರ್ ಗಳು ಈ ಮಟ್ಟದಲ್ಲಿ ವೀಕ್ಷಿಸಲ್ಪಟ್ಟಿವೆ ಎಂಬುದು ಮತ್ತೊಂದು ವಿಶೇಷ. ಇದಕ್ಕೂ ಮುನ್ನ ವಿಜಯ್ ನಟನೆಯ ಥೇರಿ ಸಿನಿಮಾ 10 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿತ್ತು.
ಭರತನ್ ನಿರ್ದೇಶಿಸಿರುವ ಭೈರವ ಚಿತ್ರ 2017 ರ ಸಂಕ್ರಾಂತಿ ಅಂದರೆ ಜನವರಿ ವೇಳೆಗೆ ತೆರೆಕಾಣಲಿದ್ದು, ಡಿಸೆಂಬರ್ ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಭೈರವ ಚಿತ್ರದಲ್ಲಿ ಕೀರ್ತಿ ಸುರೇಶ್, ಸತೀಶ್, ಜಗಪತಿಬಾಬು ನಟಿಸಿದ್ದು, ವಿಜಯ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದರೆ ಸಂತೋಶ್ ನಾರಾಯಣ್ ಸಂಗೀತ ನೀಡಿದ್ದಾರೆ.