ಸಿನಿಮಾ ಸುದ್ದಿ

'ಉಪ್ಪು ಹುಳಿ ಖಾರ'ಕ್ಕೂ ೩೬೦ ಡಿಗ್ರಿ ವರ್ಚುಯಲ್ ರಿಯಾಲಿಟಿ ಕ್ಯಾಮರಾ

Guruprasad Narayana
ಬೆಂಗಳೂರು: ಕನ್ನಡ ಚಿತ್ರರಂಗದ ತಂತ್ರಜ್ಞರು ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಸರ್ವೆಸಾಮಾನ್ಯ. ನಿರ್ದೇಶಕ ತರುಣ್ ಸುಧೀರ್ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಬಂತು ೩೬೦ ಡಿಗ್ರಿ ವರ್ಚುಯಲ್ ರಿಯಾಲಿಟಿ ಕ್ಯಾಮರಾವನ್ನು ತಂದಿದ್ದರು. ಇದನ್ನೇ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕೂಡ ತಮ್ಮ ಸಿನೆಮಾಗೆ ಬಳಸುತ್ತಿದ್ದಾರೆ. 'ಚೌಕ' ಸಿನೆಮಾದ ಆಕ್ಷನ್ ದೃಶ್ಯಾವಳಿ ಚಿತ್ರೀಕರಣಕ್ಕೆ ಇದನ್ನು ಮೊದಲು ಸ್ಯಾಂಡಲ್ ವುಡ್ ನಲ್ಲಿ ಬಳಸಲಾಗಿತ್ತು. 
ನೃತ್ಯ ನಿರ್ದೇಶಕರಿಂದ, ನಿರ್ದೇಶಕನಾಗಿ ಭಡ್ತಿ ಪಡೆದಿರುವ ಇಮ್ರಾನ್ ಸರ್ದಾರಿಯಾ ತಮ್ಮ ಮುಂದಿನ ಸಿನೆಮಾ 'ಉಪ್ಪು ಹುಳಿ ಖಾರ' ಸಿನೆಮಾದಲ್ಲಿ 'ಗಲ್ ಗಲ್ ಗಲ್ ಎನುತಿದೆ' ಹಾಡನ್ನು ಈ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಅದ್ಭುತವಾಗಿ ಈ ಹಾಡು ಮೂಡಿ ಬಂದಿದೆ ಎಂದು ತಿಳಿಸುವ ನಿರ್ದೇಶಕ, ಈ ಹಾಡಿನ ಮೂಲಕ ನಮ್ಮ ಚಿತ್ರವನ್ನು ಪ್ರಚಾರ ಮಾಡುತ್ತೇವೆ ಎನ್ನುತ್ತಾರೆ. 
ಮುಂಬೈನಿಂದ ತಂದಿರುವ ಈ ಕ್ಯಾಮರಾದಲ್ಲಿ ೧೦-೧೨ ವಿಭಿನ್ನ ಕ್ಯಾಮರಾಗಳಿದ್ದು, ಎಲ್ಲ ಕೋನದಿಂದಲೂ ಒಂದೇ ಸಮಯಕ್ಕೆ ದ್ರಶ್ಯಗಳು ಚಿತ್ರೀಕರಣಗೊಳ್ಳುತ್ತದೆ. ಇಂತಹ ಚಿತ್ರೀಕರಣದ ಸಂಕಲನ ಕಾರ್ಯ ಬಹಳ ಸವಾಲಿನ ಕೆಲಸ ಎನ್ನುತ್ತಾರೆ ಇಮ್ರಾನ್. 
ಈ ಹಾಡಿನಲ್ಲಿ ಮಾಲಾಶ್ರೀ, ಅನುಶ್ರೀ, ಜಯಶ್ರೀ, ಮಾಷ, ಧನಂಜಯ್, ಶಶಿ ಮತ್ತು ಶರತ್ ಹೆಜ್ಜೆ ಹಾಕಿದ್ದಾರಂತೆ. 
SCROLL FOR NEXT