'ಸೀಜರ್' ಸಿನೆಮಾದಲ್ಲಿ ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ
ಬೆಂಗಳೂರು: ಹಿರಿಯ ನಟ ರವಿಚಂದ್ರನ್ ಮತ್ತು ಯುವ ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ, ವಿನಯ್ ಕೃಷ್ಣ ಅವರ ನಿರ್ದೇಚನದ ಚೊಚ್ಚಲ ಸಿನೆಮಾ ಚಿತ್ರೀಕರಣ ಮುಗಿಸುವತ್ತ ಮುಂದುವರೆದಿದೆ.
ಶಬರಿಮಲೈನಲ್ಲಿ ಈ ಚಲನಚಿತ್ರದ ಕೊನೆಯ ಹಂತದ ಚಿತ್ರೀಕರಣ ನಿಗದಿಯಾಗಿರುವುದು ವಿಶೇಷ. ಅದು ಕೂಡ ಈ ದೇವಸ್ಥಾನ ಜನನಿಬಿಡವಾಗಿರುವ ಸಮಯದಲ್ಲಿ. "ಚಿತ್ರೀಕರಣ ನವೆಂಬರ್ ೨೭ ಮತ್ತು ೨೮ ಕ್ಕೆ ಪ್ರಾರಂಭವಾಗಿ ಡಿಸೆಂಬರ್ ಮಧ್ಯದಲ್ಲಿ ಮುಗಿಯಲಿದೆ" ಎನ್ನುತ್ತಾರೆ ನಿರ್ದೇಶಕ.
ಲಕ್ಷಾಂತರ ಭಕ್ತಾದಿಗಳು ಬರುವ ಸಮಯ ಇದಾಗಿರುವುದರಿಂದ ಚಿತ್ರೀಕರಣ ನಡೆಸುವುದು ಸವಾಲು ಎನ್ನುವ ನಿರ್ದೇಶಕ "ಇದಕ್ಕಾಗಿ ನಾವು ಪರವಾನಗಿ ಪಡೆದಿದ್ದೇವೆ" ಎಂದು ತಿಳಿಸುತ್ತಾರೆ. ಸ್ಕ್ರಿಪ್ಟ್ ನ ಅವಶ್ಯಕತೆಯಂತೆ ಚಿತ್ರೀಕರಣ ಶಬರಿಮಲೈನಲ್ಲಿಯೇ ನಡೆಯಬೇಕಿತ್ತು ಎಂದು ತಿಳಿಸುತ್ತಾರೆ ವಿನಯ್.
ಈ ಚಿತ್ರದಲ್ಲಿ ಕಾರ್ ವ್ಯವಹಾರದ ತಮ್ಮ ವೈಯಕ್ತಿಕ ಅನುಭವವನ್ನು ಕೂಡ ಒಳಗೊಂಡಿದ್ದಾರಂತೆ. ರವಿಚಂದ್ರನ್ ಕಾರ್ ಕೊಳ್ಳಲು ಸಾಲ ನೀಡುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಸಾಲ ಹಿಂದಿರುಗಿಸದವರ ಕಾರ್ ಗಳನ್ನೂ ಸೀಜ್ ಮಾಡುವ ವ್ಯಕ್ತಿಯ ಪಾತ್ರ ಚಿರಂಜೀವಿ ಅವರದ್ದು.
ಪಾರುಲ್ ಯಾದವ್ ನಾಯಕ ನಟಿಯಾಗಿ ನಟಿಸಿದ್ದರೆ, ಚಂದನ್ ಶೆಟ್ಟಿ ಸಿನೆಮಾಗೆ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos